Tuesday, 20th November 2018

Recent News

ಬೀದರ್ ಬ್ರೀಮ್ಸ್ ಕಾಲೇಜಿನಲ್ಲಿ ಅಗ್ನಿ ಅವಘಡ – ನಿರ್ದೇಶಕರ ಹಾಲ್ ನಲ್ಲಿ ಮಾತ್ರ ಬೆಂಕಿ!

ಬೀದರ್: ಶಾರ್ಟ್ ಸರ್ಕ್ಯೂಟ್‍ ನಿಂದಾಗಿ ಗುರುವಾರ ತಡರಾತ್ರಿ ಬೀದರ್ ನ ಬ್ರೀಮ್ಸ್ ಮೆಡಿಕಲ್ ಕಾಲೇಜು ನಿರ್ದೇಶಕರ ಹಾಲ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.

ಗುರುವಾರ ತಡರಾತ್ರಿ ಈ ಬೆಂಕಿ ಅನಾಹುತ ಸಂಭವಿಸಿದ್ದು, ಕಾಲೇಜಿನ ಮಹತ್ವದ ದಾಖಲೆಗಳು, ಒಂದು ಕಂಪ್ಯೂಟರ್, ಎಲ್‍ಇಡಿ ಟಿವಿ ಸೇರಿದಂತೆ ನಿರ್ದೇಶಕರ ಹಾಲ್ ಸಂಪೂರ್ಣ ಸುಟ್ಟು ಭಸ್ನವಾಗಿದೆ. ಕಳೆದ ಹಲವು ದಿನಗಳ ಹಿಂದೆ ನಿರ್ದೇಶಕ ಡಾ.ಚನ್ನಣ್ ವರ್ಗಾವಣೆಗೊಂಡಿದ್ದು ಸದ್ಯ ಡಾ.ಕ್ಷೀರಸಾಗರ ಪ್ರಭಾರಿಯಾಗಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಕಾಲೇಜಿನ ಎಲ್ಲಾ ಕೊಠಡಿ ಬಿಟ್ಟು ನಿರ್ದೇಶಕರ ಹಾಲ್ ನಲ್ಲಿ ಮಾತ್ರ ಬೆಂಕಿ ಅವಘಡ ಸಂಭವಿಸಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿದೆ. ಅಗ್ನಿ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲ್ಲಾ ಅನುಮಾನಗಳಿಗೆ ಪೊಲೀಸರ ತನಿಖೆಯಿಂದ ಮಾತ್ರ ಉತ್ತರ ಸಿಗಬೇಕಿದೆ.

Leave a Reply

Your email address will not be published. Required fields are marked *