Wednesday, 15th August 2018

Recent News

ರಾತ್ರೋರಾತ್ರಿ ಹೊತ್ತಿ ಉರಿದ ಕಾರು- ಗುರುತು ಸಿಗದ ರೀತಿಯಲ್ಲಿ ಇಬ್ಬರ ಸಜೀವ ದಹನ

ಹಾಸನ: ರಾತ್ರೋರಾತ್ರಿ ಐ 10 ಕಾರೊಂದು ಹೊತ್ತಿ ಉರಿದ ಪರಿಣಾಮ, ಎರಡು ದೇಹಗಳು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಬೇಲೂರಿನ ಪುಷ್ಪಗಿರಿ ಬೆಟ್ಟದ ಬಳಿ ನಡೆದಿದೆ.

ರಾತ್ರೋರಾತ್ರಿ ಐ ಟೆನ್ ಕಾರೊಂದು ಹೊತ್ತಿ ಉರಿದಿದೆ. ಘಟನೆಯಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಇದೂವರೆಗೂ ಪತ್ತೆಯಾಗಿಲ್ಲ. ಕಾರ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಯಾವುದೇ ರೀತಿಯ ಗುರುತುಗಳು ಸಿಕ್ಕಿಲ್ಲ. ಕಾರಿನಲ್ಲಿದ್ದವರು ಯಾರು? ಬೆಂಕಿ ಅವಘಡಕ್ಕೆ ಕಾರಣ ಏನೆಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ- ನಡುರಸ್ತೆಯಲ್ಲೇ ಇಳಿದು ಓಡಿದ ಪತಿ-ಪತ್ನಿ!

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ರಾಹುಲ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *