Tuesday, 20th November 2018

Recent News

ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರ್ – ನಾಲ್ವರು ಪಾರು

ದಾವಣಗೆರೆ: ಚಲಿಸುತ್ತಿದ್ದ ಕಾರಿಗೆ ದಿಢೀರ್ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದ ಬಳಿ ನಡೆದಿದೆ.

ದಾವಣಗೆರೆ ಮೂಲದ ಸಿದ್ದರಾಜ್ ಗೆ ಸೇರಿದ ಕಾರಾಗಿದ್ದು, ಇವರು ಮಲೆಬೆನ್ನೂರಿನಲ್ಲಿ ಕಾರ್ಯಕ್ರಮವನ್ನು ಮುಗಿಸಿ ಶಿವಮೊಗ್ಗದ ಸೊರಬ ಕಡೆ ಹೋಗುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಪ್ರಾರಂಭದಲ್ಲಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಹೊಗೆಯನ್ನು ನೋಡಿ ಕಾರಿನಲ್ಲಿದ್ದ ನಾಲ್ಕು ಜನರು ಕೆಳಗಿಳಿದಿದ್ದಾರೆ. ಬಳಿಕ ಕಾರಿನ ಬೆಂಕಿ ಹಾರಿಸಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ಕೊನೆಗೆ ಕಾರು ನಡು ರಸ್ತೆಯಲ್ಲಿ ಹೊತ್ತಿಕೊಂಡು ಉರಿದಿದೆ. ಈ ಕಾರು ರೆನಾಲ್ಟ್ ಕಂಪನಿಗೆ ಸೇರಿದ ಕ್ವಿಡ್ ಕಾರಾಗಿದೆ.

ಈ ಘಟನ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನಡೆದಿದೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *