Connect with us

Cinema

ಹುಚ್ಚ ವೆಂಕಟ್ ಮೇಲೆ ಹಲ್ಲೆಗೈದವ್ರ ವಿರುದ್ಧ ಪ್ರಕರಣ ದಾಖಲು

Published

on

– ಮಹಿಳಾ ಎಸ್‍ಪಿಗೆ ಜಗ್ಗೇಶ್ ಧನ್ಯವಾದ

ಮಂಡ್ಯ: ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ನವರಸನಾಯಕ ಜಗ್ಗೇಶ್ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಬದುಕು ಯಾರ ಕೈಯಲ್ಲೂ ಇಲ್ಲ’- ವೆಂಕಟ್ ಮೇಲಿನ ಹಲ್ಲೆಗೆ ವಿಜಿ ಖಂಡನೆ

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ವೆಂಕಟ್ ಮೇಲೆ ಕೈ ಮಾಡಿದವರ ಮೇಲೆ ಎಫ್‍ಐಆರ್ ದಾಖಲು ಮಾಡಿದ ಮಂಡ್ಯ ಎಸ್‍ಪಿ ಶೋಭಾ ಮೇಡಂ ಅವರಿಗೆ ಕಲಾಪ್ರೇಮಿಗಳು ಧನ್ಯವಾದ ಅರ್ಪಿಸಿ. ಸಹೃದಯಿ ದಕ್ಷ ಅಧಿಕಾರಿ ಸಹೋದರಿಗೆ ನನ್ನ ವೈಯಕ್ತಿಕ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಜೂನ್ 10 ರಂದು ಮಂಡ್ಯದ ಉಮ್ಮಡಹಳ್ಳಿ ಹುಚ್ಚಾ ವೆಂಕಟ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿತ್ತು. ಟೀ ಕುಡಿಯಲು ಬಂದಾಗ ಆತನನ್ನು ರೇಗಿಸಿ ಯುವಕರ ಗುಂಪು ಹಲ್ಲೆ ಮಾಡಿತ್ತು. ಈ ಕುರಿತು ಟೀ ಅಂಗಡಿ ಮುಕ್ರಂ ಪಾಷ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 504(ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು) ಹಾಗೂ 506(ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಆರೋಪಿ ಯುವಕರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.