ಬೆಂಗಳೂರು: ಗ್ಯಾಂಗ್ವೊಂದು ಜುಟ್ಟು ಅಂದಿದ್ದಕ್ಕೆ ಸಿನಿಮಾ ಸ್ಟೈಲ್ನಲ್ಲಿ ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದು ಹಲ್ಲೆಗೈದ ಘಟನೆ ನಗರದ ರಾಮಮೂರ್ತಿ ನಗರ ಟಿಸಿ ಪಾಳ್ಯದಲ್ಲಿ ನಡೆದಿದೆ.
ವಿನಯ್, ಬಸವರಾಜು, ಗುರು, ಹಲ್ಲೆಗೊಳಾದ ಯುವಕರು. ತರುಣ್, ರಾಹುಲ್, ವಿಕ್ಕಿ, ಆ್ಯಂಡ್ ಗ್ಯಾಂಗ್ನಿಂದ ಹಲ್ಲೆ ನಡೆದಿದೆ. ಯುವಕರು ಮದ್ಯಪಾನ ಮಾಡಲು ಬಾರ್ಗೆ ತೆರಳಿದ್ದರು. ಇದೇ ವೇಳೆ ತರುಣ್ ಗ್ಯಾಂಗ್ ಅಲ್ಲಿಗೆ ಬಂದಿತ್ತು. ಗ್ಯಾಂಗ್ನಲ್ಲಿ ರಾಹುಲ್ ಜುಟ್ಟು ಬಿಟ್ಟಿದ್ದನ್ನು ನೋಡಿ ಯುವಕರು ನಕ್ಕಿದ್ದಾರೆ. ಇದೇ ವಿಚಾರಕ್ಕೆ ಎರಡು ಗ್ಯಾಂಗ್ಗಳ ನಡುವೆ ಮಾರಮಾರಿ ನಡೆದು ಗಲಾಟೆ ಶುರುವಾಗಿದೆ. ಇದನ್ನೂ ಓದಿ: ಎನ್ಟಿಆರ್ ಸಾಂಗ್ಗೆ ಸಖತ್ ಸ್ಟೆಪ್ ಹಾಕಿದ ರಮೇಶ್ ಕುಮಾರ್
ನಂತರ ಆ ಮೂವರು ಯುವಕರ ಮೇಲೆ ತರುಣ್ ಆ್ಯಂಡ್ ಗ್ಯಾಂಗ್ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆ ನಡೆಸಿದೆ. ಗಾಯಗೊಂಡ ಯುವಕರು ರಾಮಮೂರ್ತಿ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ
ಪೆÇಲೀಸರು ತರುಣ್ನನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.