ಪುಷ್ಪಾರ್ಚನೆ, ನಂದಿಧ್ವಜ ಪೂಜೆಗೆ ಕಡಿಮೆ ಜನ ಇದಷ್ಟು ಒಳ್ಳೆಯದು: ಯದುವೀರ್

1 Min Read

ಮೈಸೂರು: ಅಂಬಾರಿಗೆ ಪುಷ್ಪಾರ್ಚನೆ ಹಾಗೂ ನಂದಿಧ್ವಜ ಪೂಜೆಗೆ ಕಡಿಮೆ ಜನ ಇದಷ್ಟು ಒಳ್ಳೆಯದು ಎಂದು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ (Yaduveer Wadeyar) ಅವರು ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ (Chamundi Hills) ಮಾಧ್ಯಮದವರೊಂದಿಗೆ ದಸರಾ ಶಿಷ್ಟಾಚಾರ ವಿಚಾರವಾಗಿ ಮಾತನಾಡಿದ ಅವರು, ಮೊದಲು ಶಿಷ್ಟಾಚಾರ ಏನು ಎಂಬುದು ಸ್ಪಷ್ಟಪಡಿಸಿ. ಇಲ್ಲಿ ಶಿಷ್ಟಾಚಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಪುಷ್ಪಾರ್ಚನೆ ಮತ್ತು ನಂದಿ ಧ್ವಜ ಪೂಜೆಗೆ ಕಡಿಮೆ ಜನ ಇದಷ್ಟು ಒಳ್ಳೆಯದು. ಸಿಎಂ ಜೊತೆಗೆ ಒಂದಿಬ್ಬರು ಇದ್ದರೆ ಸಾಕು. ಎಲ್ಲರೂ ಯಾಕೆ ಅಲ್ಲಿಗೆ ಹೋಗಬೇಕು? ಎಲ್ಲಾ ವಿಧಿವಿಧಾನಕ್ಕು ನಿಯಮಗಳು ಇರಬೇಕು. ಅದನ್ನ ಸರ್ಕಾರ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರಿ ಮಳೆ – ಕೊಡೈಕೆನಾಲ್ ಘಾಟ್‌ನ ಮೂರು ಕಡೆ ಭೂಕುಸಿತ, ಸಂಚಾರಕ್ಕೆ ಅಡಚಣೆ

ಇದೇ ವೇಳೆ ಪುಷ್ಪಾರ್ಚನೆಗೆ ಪಕ್ಕದ ರಾಜ್ಯಗಳ ಸಿಎಂ ಕರೆದ ವಿಚಾರವಾಗಿ ಮಾತನಾಡಿ, ಅದರಲ್ಲಿ ಯಾವ ತಪ್ಪು ಇಲ್ಲ. ಅತಿಥಿಯಾಗಿ ಸಿಎಂಗಳನ್ನ ಕರೆದ ಮೇಲೆ ಪುಷ್ಪಾರ್ಚನೆಗೆ ಕರೆಯದಿದರೆ ತಪ್ಪಾಗುತ್ತದೆ. ಅವರನ್ನ ಬಿಟ್ಟು ಉಳಿದವರು ಬಂದಿದ್ದರ ಬಗ್ಗೆ ಸರ್ಕಾರ ಸ್ಪಷ್ಟೀಕರಣ ಕೊಡಲಿ. ಈಗ ನಾವು ಏನೂ ಮಾತನಾಡಿದರೂ ಅದು ರಾಜಕೀಯ ಆಗುತ್ತದೆ. ನಂಧಿ ಧ್ವಜ ಮತ್ತು ಪುಷ್ಪಾರ್ಚನೆಗೆ ಶಿಷ್ಟಾಚಾರ ಫ್ರೇಮ್ ಬೇಕಿದೆ ಎಂದಿದ್ದಾರೆ.

Share This Article
Exit mobile version