Connect with us

Districts

300 ಚೀಲ ನಕಲಿ ರಸಗೊಬ್ಬರ ಪತ್ತೆ

Published

on

Share this

ಕೊಪ್ಪಳ: ಗಂಗಾವತಿ ನಗರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 300 ಚೀಲ ನಕಲಿ ರಸಗೊಬ್ಬರ ಪತ್ತೆಯಾಗಿದ್ದು, ಕೃಷಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿರುವ ಮಳಿಗೆಯಲ್ಲಿ ಅಂಗಡಿಯನ್ನು ಆರಂಭ ಮಾಡಿಕೊಂಡು ಕೆಲ ವ್ಯಕ್ತಿಗಳು ನಕಲಿ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನಾನಾ ಬಗೆಯ ಬ್ರಾಂಡ್‍ಗಳ ಚೀಲಗಳಲ್ಲಿ ನಕಲಿ ರಸಗೊಬ್ಬರವನ್ನು ತುಂಬಿಕೊಂಡು ಸಿಂಧನೂರ, ಮಸ್ಕಿ ತಾಲೂಕುಗಳ ಕಡೆಗೆ ಸಾಗಾಟ ಮಾಡಲಾಗುತ್ತಿದ್ದು, ಲಾರಿಯನ್ನು ಪೊಲೀಸರು ತಪಾಸಣೆ ನಡೆಸಿದ ವೇಳೆಯಲ್ಲಿ ಪ್ರಕರಣ ಬಯಲಿಗೆ ಬಂದಿದೆ.

ನಾನಾ ಬಗೆಯ ಹೆಸರಿನಲ್ಲಿ ರಸಗೊಬ್ಬರವನ್ನು ಗಂಗಾವತಿಯಿಂದ ಲಾರಿಯಲ್ಲಿ ತುಂಬಿಕೊಂಡು ಮಸ್ಕಿ ತಾಲೂಕಿನ ಗ್ರಾಮಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈಗಾಗಲೇ ಕೃಷಿ ಅಧಿಕಾರಿಗಳು ನಕಲಿ ರಸಗೊಬ್ಬರಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಅಂಗಡಿಯನ್ನು ಕೂಡ ಪರಿಶೀಲನೆಯನ್ನು ನಡೆಸಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಚು ಹಾಕಿ ದರೋಡೆ ಮಾಡ್ತಿದ್ದ ಇಬ್ಬರ ಬಂಧನ

Click to comment

Leave a Reply

Your email address will not be published. Required fields are marked *

Advertisement