Saturday, 23rd March 2019

Recent News

ಹೃದಯ ಚಿಕಿತ್ಸೆಗೆ ಹಣವಿಲ್ಲದ್ದಕ್ಕೆ ಮಗಳನ್ನು ಕೊಂದೇ ಬಿಟ್ಟ!

ಕಾರವಾರ: ಹೃದಯ ಕಾಯಿಲೆಗೆ ಚಿಕಿತ್ಸೆ ನೀಡಲು ಹಣ ವ್ಯಯಿಸಲಾಗದೇ ವಿಷ ನೀಡಿ ತಂದೆ ಮಗಳನ್ನೇ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕುಂಬ್ರಿಯಲ್ಲಿ ನಡೆದಿದೆ.

ನಯನಾ(11) ತಂದೆಯಿಂದ ಕೊಲೆಯಾದ ಮಗಳು. ನಾಗರಾಜ್ ಪೂಜಾರಿ(44) ಮೂರು ಜನ ಹೆಣ್ಣು ಮಕ್ಕಳನ್ನು ಹೊಂದಿದ್ದಾನೆ. ನಯನಾ ಕೊನೆಯ ಮಗಳಾಗಿದ್ದು, ಹೃದಯ ಕಾಯಿಲೆಯಿಂದ ಬಳಲುತ್ತಿದ್ದಳು.

ಈ ಹಿಂದೆ ನಾಗರಾಜ್ ದಾನಿಗಳ ಸಹಾಯದಿಂದ ನಯನಾಗೆ ಬೈಪಾಸ್ ಸರ್ಜರಿ ಮಾಡಿಸಿದ್ದನು. ಬಳಿಕ ಹೆಚ್ಚು ಹಣ ಖರ್ಚು ಮಾಡಿದ್ದರಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲದೇ ನಾಗರಾಜ್ ಮದ್ಯ ವ್ಯಸನಿಯಾಗಿದ್ದ.

ನಾಗರಾಜ್ ಮದ್ಯ ವ್ಯಸನಿ ಆಗಿದ್ದಾನೆ ಎಂದು ಪತ್ನಿ ಕೂಡ ಮನೆ ಬಿಟ್ಟು ಹೋಗಿದ್ದಾಳೆ. ಬುಧವಾರ ನಯನಾ ತಾಯಿ ಬೇಕೆಂದು ಹಠ ಹಿಡಿದಿದ್ದಳು. ಇದರಿಂದ ನಾಗರಾಜ್ ಇನ್ನಷ್ಟು ಕೋಪಗೊಂಡು ಮಗಳಿಗೆ ಕ್ರಿಮಿನಾಶಕ ತಿನ್ನಿಸಿ ಕೊಲೆ ಮಾಡಿದ್ದಾನೆ.

ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *