Connect with us

Districts

ಕೆಜಿಎಫ್ ಸ್ಟೈಲಿನಲ್ಲಿ ಸುತ್ತಿಗೆಯಿಂದ ಪತ್ನಿ-ಮಗಳ ಮೇಲೆ ತಂದೆ ಹಲ್ಲೆ

Published

on

ಹಾಸನ: ಹೆಣ್ಣು ಮಕ್ಕಳೇ ಹುಟ್ಟಿದ್ದೀರಾ ಎಂದು ತಂದೆಯೊಬ್ಬ ಕುಡಿದು ಬಂದು ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಚಂಪಕ ನಗರದಲ್ಲಿ ನಡೆದಿದೆ.

ಪ್ರಶಾಂತ್ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡಿದ ತಂದೆ. ಪ್ರಶಾಂತ್ ಕೆಜಿಎಫ್ ಸ್ಟೈಲ್ ಎಂದು ಸುತ್ತಿಗೆಯಿಂದ ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಅದನ್ನು ವಿಡಿಯೋ ಸಹ ಮಾಡಿದ್ದು, ಇದೀಗ ಅದು ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಪ್ರಶಾಂತ್ ನಾನು ಮಯೂರ, ನಾನಿರುವುದೇ ನಿಮಗಾಗಿ, ಕೆಜಿಎಫ್ ಸಿನಿಮಾ ನೋಡಿದ್ದೀರಾ ಎಂದು ಡೈಲಾಗ್ ಹೊಡೆದು ಹಲ್ಲೆ ಮಾಡಿದ್ದಾನೆ. ಬಳಿಕ ಹೆಣ್ಣು ಮಕ್ಕಳೇ ಹುಟ್ಟಿದ್ದೀರಾ ಎಂದು ಕುಡಿದು ಬಂದು ಮಡದಿ ಮಕ್ಕಳಿಗೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

ಈ ವಿಡಿಯೋ ಹಂಚಿಕೊಂಡು ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಪ್ರಶಾಂತ್ ಕೈಯಲ್ಲಿ ದೊಡ್ಡ ಸುತ್ತಿಗೆ ಹಿಡಿದು ಮಗಳಿಗೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ಪತ್ನಿ ಬಿಡಿಸಲು ಯತ್ನಿಸಿದರೂ ಸುಮ್ಮನಾಗದೆ ದೌರ್ಜನ್ಯ ಮಾಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಸಕಲೇಶಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.