Connect with us

Crime

14ರ ಮಗಳ ಮೇಲೆ ತಂದೆಯಿಂದಲೇ 9 ತಿಂಗಳು ನಿರಂತರ ಅತ್ಯಾಚಾರ- ಪ್ರಶ್ನಿಸಿದ ಪತ್ನಿಗೆ ಕೊಲೆ ಬೆದರಿಕೆ

Published

on

– ಧೈರ್ಯ ತುಂಬಿಕೊಂಡು ದೂರು ನೀಡಿದ ತಾಯಿ-ಮಗಳು

ಗಾಂಧಿನಗರ: ಪಾಪಿ ತಂದೆ ತನ್ನ 14 ವರ್ಷದ ಮಗಳ ಮೇಲೆಯೇ 9 ತಿಂಗಳುಗಳ ಕಾಲ ನಿರಂತರ ಅತ್ಯಾಚಾರ ನಡೆಸಿ ವಿಕೃತಿ ಮೆರೆದಿದ್ದಾನೆ.

ಗುಜರಾತ್‍ನ ವಡೋದರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಾಲಕಿ ದೂರು ನೀಡಿದ ಬಳಿಕ ಕಾಮ ಪಿಶಾಚಿ ತಂದೆಯನ್ನು ಬಂಧಿಸಲಾಗಿದೆ. ಮೂವರು ಮಕ್ಕಳ ಪೈಕಿ ಇವಳೇ ಹಿರಿಯಳಾಗಿದ್ದು, ಜಿಲ್ಲೆಯ ಸವಲಿ ತಾಲೂಕಿನ ಭದರ್ವ ಪೊಲೀಸ್ ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದಾಳೆ. 38 ವರ್ಷದ ನನ್ನ ತಂದೆ ಆಟೋ ಡ್ರೈವರ್ ಆಗಿದ್ದು, ಮನೆಯಲ್ಲಿ ಒಬ್ಬಳೇ ಇದ್ದಾಗ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾಳೆ. ಈ ಕುರಿತು ಪತ್ನಿ ವಿರೋಧ ವ್ಯಕ್ತಪಡಿಸಿದಾಗಲೆಲ್ಲ ತಾಯಿ ಹಾಗೂ ಮಕ್ಕಳು ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.

ಪ್ರಕರಣ ಬೆಳಕಿಗೆ ಬಂದ್ದದ್ದು ಹೇಗೆ?
14 ವರ್ಷದ ಬಾಲಕಿಗೆ ಋತುಚಕ್ರದಲ್ಲಿ ವ್ಯತ್ಯಾಸವಾಗಿದ್ದು, ಈ ಕುರಿತು ತಾಯಿ ಪ್ರಶ್ನಿಸಿದ್ದಾಳೆ. ಈ ವೇಳೆ ಘಟನೆ ಕುರಿತು ಬಾಲಕಿ ತನ್ನ ತಾಯಿಗೆ ವಿವರಿಸಿದ್ದಾಳೆ. ಪತಿಯ ಆಘಾತಕಾರಿ ಕೃತ್ಯದ ಕುರಿತು ಅರಿತ ಮಹಿಳೆ, ಪತಿಯನ್ನು ಪ್ರಶ್ನಿಸಿದ್ದಾಳೆ. ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ಈ ಕುರಿತು ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದಾನೆ.

ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಲು ಯೋಚಿಸಿದ್ದಾಳೆ. ಆದರೆ ಬಾಯ್ಬಿಡದಂತೆ ಆರೋಪಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ದೂರು ನೀಡದಂತೆ ಒತ್ತಡ ಹೇರಿದ್ದಾನೆ. ಹಾಗಿದ್ದರೂ ತಾಯಿ, ಮಗಳ ಜೋಡಿ ಧೈರ್ಯ ತುಂಬಿಕೊಂಡು ದೂರು ನೀಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಬಾಲಕಿಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಐಪಿಸಿಯ ವಿವಿಧ ಸೆಕ್ಷನ್ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Click to comment

Leave a Reply

Your email address will not be published. Required fields are marked *