ಮಗಳನ್ನು ಕೊಂದು, ಆತ್ಮಹತ್ಯೆಗೆ ಶರಣಾದ ತಂದೆ

Published by
Public TV
Advertisements

ಬೆಂಗಳೂರು/ಆನೇಕಲ್: ಹಣಕಾಸಿನ ತೊಂದರೆಯಿಂದ ಏಳು ವರ್ಷದ ಮಗಳನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

Advertisements

ವಿಜಯಕುಮಾರ್ (39) ಆತ್ಮಹತ್ಯೆ ಮಾಡಿಕೊಂಡ ತಂದೆ. ಹೆಂಡತಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದ ವೇಳೆ ವಿಜಯಕುಮಾರ್ ತನ್ನ ಏಳು ವರ್ಷದ ಮಗಳು ಸಮೀಕ್ಷಾಳನ್ನು ತಲೆದಿಂಬು, ಚಾರ್ಜರ್ ವೈರ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ವಿಜಯ್ ಕುಮಾರ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಅಪಪ್ರಚಾರ ಮಾಡಿದವರು ಕೊನೆಗೆ ಲಸಿಕೆ ಹಾಕಿಸಿಕೊಂಡರು: ಅಖಿಲೇಶ್‍ಗೆ ಮೋದಿ ಟಾಂಗ್

Advertisements

ವೆಲ್ಡರ್ ಕೆಲಸ ಮಾಡಿಕೊಂಡಿದ್ದ ವಿಜಯ್ ಕುಮಾರ್ ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರಾಗಿದ್ದಾರೆ. ಬೊಮ್ಮಸಂದ್ರದಲ್ಲಿ ರೇವಣ್ಣ ಅವರ ಮನೆಯಲ್ಲಿ ವಾಸವಾಗಿದ್ದರು. ನಂತರ ಘಟನಾ ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದ ಡಿವೈಎಸ್‍ಪಿ ಮಲ್ಲೇಶ್ ಹೆಬ್ಬಗೋಡಿ ಪೊಲೀಸರಿಗೆ ವಿಜಯ್‍ಕುಮಾರ್ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ದೊಡ್ಡತನ- ಮಾಯಾವತಿ ಮೆಚ್ಚುಗೆ

Advertisements