Monday, 20th August 2018

ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಜಲಸಮಾಧಿ!

ಬೆಂಗಳೂರು: ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿದ್ದ ಕೃಷಿ ಹೊಂಡದಲ್ಲಿ ಈಜಲು ಹೋಗಿ ತಂದೆ-ಮಗ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.

ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಲೇಕ್ಯಾತನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ತಂದೆ ರಾಜಣ್ಣ ಮತ್ತು ಮಗ ಅಮಿತ್ ಮೃತ ದುರ್ದೈವಿಗಳು. ರಾಜಣ್ಣ ಮೂಲತಃ ದುಬೈನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ರಜೆಯ ನಿಮಿತ್ತ ಊರಿಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಗುರುವಾರ ಮಧ್ಯಾಹ್ನ ಮಗ ಅಮೀತ್ ನೀರಿಗೆ ಇಳಿದಿದ್ದಾನೆ. ಅಮೀತ್ ಈಜು ಬಾರದೆ ಹೊಂಡದಲ್ಲಿ ಮುಳುಗುವ ವೇಳೆ ಮಗನ ರಕ್ಷಣೆಗೆ ರಾಜಣ್ಣ ತೆರಳಿದ್ದಾರೆ. ಆದರೆ ಮಗನ ಜೊತೆ ಅವರು ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇನ್ನೂ ಘಟನೆಯ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನೆಲಮಂಗಲ ಅಗ್ನಿ ಶಾಮಕ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ಮಾಡಿ ಮೃತ ದೇಹಗಳನ್ನು ಹೊರತೆಗಿದಿದ್ದಾರೆ.

Leave a Reply

Your email address will not be published. Required fields are marked *