Sunday, 22nd September 2019

ರೆಸ್ಟೋರೆಂಟ್‍ನಲ್ಲಿ ಗೆಳೆಯನೊಂದಿಗೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ಅಣ್ಣ!

– ನೋಡ ನೋಡ್ತಿದ್ದಂತೆ ಹೈವೇವರೆಗೂ ಬಂತು ಹಂಗಾಮ
– 10 ನಿಮಿಷದಲ್ಲಿ ಬಂದ ಪೊಲೀಸರಿಗೂ ಏನು ಸಿಗಲಿಲ್ಲ

ಚಂಡೀಗಢ: ಯುವತಿಯೊಬ್ಬಳು ತನ್ನ ಗೆಳೆಯನೊಂದಿಗೆ ರೆಸ್ಟೋರೆಂಟ್‍ನಲ್ಲಿ ಆರಾಮವಾಗಿ ಫಾಸ್ಟ್ ಫುಡ್ ಸೇವಿಸುತ್ತಿದ್ದಳು. ಈ ವೇಳೆ ಬೈಕಿನಲ್ಲಿ ಬಂದ ಯುವಕರನ್ನು ನೋಡಿದ ಯುವತಿ ಒಂದು ಕ್ಷಣ ಆಶ್ಚರ್ಯಚಕಿತಳಾಗಿದ್ದಳು.

ಯುವತಿಯ ಸೋದರನೇ ಬೈಕ್‍ನಲ್ಲಿ ಬಂದ ಯುವಕ. ಹುಡುಗನೊಂದಿಗೆ ತನ್ನ ಸೋದರಿಯನ್ನು ನೋಡಿದ ಸೋದರ, ಅಲ್ಲಿಯೇ ಆಕೆಯೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಹರಿಯಾಣದ ಫತ್ಹೇಬಾದ್ ನಗರದ ಮಾರ್ಲಾ ಕಾಲೋನಿಯ ಜಿಟಿ ರಸ್ತೆಯಲ್ಲಿರುವ ರೆಸ್ಟೋರೆಂಟ್ ನಲ್ಲಿ ನಡೆದಿದೆ. ಗೆಳತಿಯ ಪೋಷಕರನ್ನು ನೋಡುತ್ತಲೇ ಆಕೆಯ ಜೊತೆಗಿದ್ದ ಯುವಕ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ.

ಇತ್ತ ಸೋದರಿಯ ಮೇಲೆ ಹಲ್ಲೆ ನಡೆಸುತ್ತಾ ಬಂದ ಅಣ್ಣ ಆಕೆಯನ್ನು ರೆಸ್ಟೋರೆಂಟ್ ನಿಂದ ಹೊರ ಎಳೆದು ತಂದಿದ್ದಾನೆ. ಹಲ್ಲೆ ನಡೆಸುತ್ತಾ ರಾಷ್ಟ್ರೀಯ ಹೆದ್ದಾರಿವರೆಗೂ ಬಂದಿದ್ದು, ಸ್ಥಳದಲ್ಲಿ ಜನರು ಸೇರಿದ್ದರಿಂದ ಕೆಲ ಕಾಲ ಟ್ರಾಫಿಕ್ ಉಂಟಾಗಿತ್ತು. ತಾಯಿ ವಿರೋಧ ವ್ಯಕ್ತಪಡಿಸಿದರೂ, ಸೋದರ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುವಷ್ಟರಲ್ಲಿ ಯುವಕ ತನ್ನ ಸೋದರಿ ಮತ್ತು ತಾಯಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಗಲಾಟೆಗೆ ನಡೆಯುತ್ತಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿಗೆ ಹೋದಾಗ ಯಾರು ಇರಲಿಲ್ಲ. ಸ್ಥಳೀಯರಿಗೂ ಹಲ್ಲೆ ನಡೆಸಿದ, ಹಲ್ಲೆಗೊಳಗಾದ ಯುವತಿಯ ಪರಿಚಯ ಇಲ್ಲ ಅಂತಾ ಹೇಳಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *