ರೈತರು ಮನಸ್ಸು ಮಾಡಿದರೆ ಸರ್ಕಾರವನ್ನೇ ಬದಲಿಸಬಹುದು: ಕೆಸಿಆರ್

Advertisements

ಚಂಡೀಗಢ: ಪ್ರತಿಭಟಿಸುವ ರೈತರನ್ನು ಖಲಿಸ್ತಾನಿ, ಭಯೋತ್ಪಾದಕರು ಎಂದು ಕರೆಯಲಾಗಿದೆ. ಆದರೂ ರೈತ ಮುಖಂಡರಿಗೆ ನಾನು ವಿನಂತಿಸುವುದೇನೆಂದರೆ, ಪಂಜಾಬ್, ಹರಿಯಾಣ, ದೆಹಲಿ ಹಾಗೂ ಉತ್ತರ ಪ್ರದೇಶ ಮಾತ್ರವಲ್ಲದೇ ದೇಶಾದ್ಯಂತ ನಾವು ಪ್ರತಿಭಟನೆಯನ್ನು ಮುಂದುವರಿಸಬೇಕು. ರೈತರು ಬಯಸಿದರೆ ಸರ್ಕಾರವನ್ನೇ ಬದಲಿಸಬಹುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದರು.

Advertisements

ಭಾನುವಾರ ಚಂಡೀಗಢದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಭೇಟಿಯಾದರು. ಈ ವೇಳೆ ಚೀನಾ ಸೈನಿಕರ ವಿರುದ್ಧ ಗಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರಿಗೆ ಹಾಗೂ ಕಳೆದ ವರ್ಷ ರೈತ ವಿರೋಧಿ ಪ್ರತಿಭಟನೆಯಲ್ಲಿ ಮಡಿದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದನ್ನೂ ಓದಿ: ಚುನಾವಣೆ ವಿಜಯ ಸಂಭ್ರಮದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ – 62 ಮಂದಿ ವಿರುದ್ಧ ಪ್ರಕರಣ

Advertisements

ರೈತ ಹಕ್ಕುಗಳ ಹೋರಾಟದ ವೇಳೆ ಸಾವನ್ನಪ್ಪಿದ ರೈತ ಕುಟುಂಬವನ್ನು ಭೇಟಿಯಾದ ಕೆಸಿಆರ್, ದೆಹಲಿ ಸಿಎಂ ಕೇಜ್ರಿವಾಲ್ ದೆಹಲಿಯ ಗಡಿಯಲ್ಲಿ ಕುಳಿತು ರೈತರ ಸೇವೆ ಮಾಡುವ ಅವಕಾಶವನ್ನು ಪಡೆದಿರುವುದು ಅದೃಷ್ಟ. ನಾವು ಕೂಡ ನಮ್ಮ ರೈತ ಸಹೋದರ, ಸಹೋದರಿಯರನ್ನು ಸದಾ ಬೆಂಬಲಿಸುತ್ತೇವೆ. ನಾವು ಸತ್ತವರನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಈ ನೋವಿನಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ಸಾಂತ್ವನ ಹೇಳಿದರು. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವವರಿಗೆ ಎಚ್ಚರಿಕೆ ನೀಡಿದ ಯೋಗಿ – ನಿಯಮ ಮೀರಿದರೆ ಕ್ರಮ

 

Advertisements
Exit mobile version