Saturday, 19th October 2019

Recent News

ಕ್ರೀಡಾಂಗಣದಲ್ಲಿ ಆಕಳಿಸಿದ ಪಾಕ್ ನಾಯಕನ ಕಾಲೆಳೆದ ನೆಟ್ಟಿಗರು

ಮ್ಯಾಂಚೆಸ್ಟರ್: ಫೀಲ್ಡಿಂಗ್ ವೇಳೆ ಆಕಳಿಸಿದ ಪಾಕಿಸ್ತಾನ ತಂಡದ ನಾಯಕ, ಕೀಪರ್ ಸರ್ಫರಾಜ್ ಅಹಮದ್ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಾಲೆಳೆದಿದ್ದಾರೆ.

2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇಂದು ನಡೆಯುತ್ತಿದ್ದು, ಟಾಸ್ ಗೆದ್ದ ಪಾಕ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಈ ವೇಳೆ ಸರ್ಫರಾಜ್ ಅಹಮದ್ ಆಕಳಿಸಿದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಾಕಿಸ್ತಾನದ ಬೌಲರ್‍ಗಳನ್ನು ಎದುರಿಸಿದ ಟೀಂ ಇಂಡಿಯಾ ಬ್ಯಾಟ್ಸಮನ್‍ಗಳು ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿ 337 ರನ್ ಗಳ ಗುರಿ ನೀಡಿದೆ. ಮೊದಲ ಇನಿಂಗ್ಸ್ ಮುಗಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಕ್ಕೆ ಲಗ್ಗೆ ಇಟ್ಟ ಟೀಂ ಇಂಡಿಯಾ ಅಭಿಮಾನಿಗಳು, ಸರ್ಫರಾಜ್ ಅಹಮದ್ ಆಕಳಿಸುತ್ತಿರುವ ವಿಡಿಯೋ, ಫೋಟೋ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಇವರು ಈ ಗ್ರಹಕ್ಕೆ ಇಳಿದ ಅತ್ಯಂತ ಉತ್ಸಾಹಿ ಕ್ರಿಕೆಟಿಗ. ತೀವ್ರವಾದ ಸಂದರ್ಭಗಳಲ್ಲಿಯೂ ಆಕಳಿಸುವ ಸಾಮಥ್ರ್ಯವಿದೆ. ಈ ಸಣ್ಣ ಆಕಳಿಯ ಮೂಲಕ ಅವರು ಭಾರತದ ವಿರುದ್ಧ ಗೆಲ್ಲುವ ಕನಸು ಕಂಡರು. ದಂತಕಥೆ ಎಂದು ಇಫ್ರಾನ್ ಎಂಬವರು ಲೇವಡಿ ಮಾಡಿದ್ದಾರೆ.

ವಿಕೆಟ್‍ಗಳು ಬೀಳುತ್ತಿಲ್ಲ. ಸುಮ್ಮನೆ ನಿದ್ದೆ ಮಾಡಿ ಎಂದು ಸರ್ ಜಡೇಜಾ ಫ್ಯಾನ್ ಹೇಳಿದ್ದಾರೆ. ಭಾರತದ ವಿರುದ್ಧ ಗೆಲುವು ಸಾಧಿಸುವುದು ಹೇಗೆ ಅಂತ ರಾತ್ರಿಯಲ್ಲ ಕುಳಿತು ಪ್ಲಾನ್ ಮಾಡಿದ್ದಾರೆ ಎಂದು ಅಹ್ಮದ್ ಟ್ವೀಟ್ ಮಾಡಿದ್ದಾರೆ.

ಮ್ಯಾಂಚೆಸ್ಟರ್ ನಲ್ಲಿ ವಾತಾವರಣ ಹಿತಕರವಾಗಿದೆ. ನನಗೆ ವಿಶ್ರಾಂತಿ ಬೇಕಿದೆ. ಎರಡು ಪ್ಲೇಟ್ ಬಿರಿಯಾನಿ ತಿಂದ ನಂತರ ನನ್ನ ಪ್ರತಿಕ್ರಿಯೆ…. ಎಂದು ನೆಟ್ಟಿಗರು ಸರ್ಫರಾಜ್ ಅಹಮದ್ ಕಾಲೆಳೆದಿದ್ದಾರೆ.

Leave a Reply

Your email address will not be published. Required fields are marked *