Sunday, 19th May 2019

ಅನಾಥಾಶ್ರಮಗಳಿಗೆ ಅಡುಗೆ ಸಾಮಗ್ರಿ ನೀಡಿ ದರ್ಶನ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 42ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸರಳವಾಗಿ ಆಚರಿಸಿ ಮತ್ತೊಬ್ಬರಿಗೆ ಆದರ್ಶವಾಗಿದ್ದಾರೆ. ಅನಾಥಾಶ್ರಮಗಳಿಗೆ ಅಡುಗೆ ಸಾಮಾಗ್ರಿಗಳನ್ನು ನೀಡುವ ಮೂಲಕ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಿದ್ದಾರೆ.

ನಗರದ ಗಾಂಧಿ ಸರ್ಕಲ್ ಬಳಿ ನೂರಾರು ಡಿ ಬಾಸ್ ಅಭಿಮಾನಿಗಳು ಬಹಳ ಸರಳತೆಯಿಂದ ದರ್ಶನ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಯೋಧರು ಹುತಾತ್ಮರಾದ ಹಿನ್ನಲೆ ಯಾವುದೇ ಕೇಕ್, ಪಟಾಕಿ ಹಚ್ಚಿ ಸಡಗರದಿಂದ ಅಭಿಮಾನಿಗಳು ದರ್ಶನ್ ಅವರ ಹುಟ್ಟುಹಬ್ಬ ಆಚರಿಸಲಿಲ್ಲ. ಬದಲಾಗಿ ಅನಾಥಾಶ್ರಮಗಳಿಗೆ ಅಕ್ಕಿ, ಹಾಗೂ ಆಡುಗೆ ಎಣ್ಣೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ನೀಡಿ ಹುಟ್ಟುಹಬ್ಬ ಆಚರಿಸಿ ಮಾದರಿಯಾಗಿದ್ದಾರೆ.

ಜಿಲ್ಲೆಯ ಐದಕ್ಕೂ ಹೆಚ್ಚು ಅನಾಥಾಶ್ರಮಗಳಿಗೆ ದರ್ಶನ್ ಅಭಿಮಾನಿಗಳ ಸಂಘದ ಸದಸ್ಯರು ತೆರಳಿ ತಮ್ಮ ಕೈಲಾದ ಮಟ್ಟಿಗೆ ಅಡಿಗೆ ಸಾಮಗ್ರಿಗಳನ್ನು ನೀಡಿ ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಸರಳವಾಗಿ ಸಂಭ್ರಮಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *