Connect with us

Bengaluru City

ಅಭಿಮಾನಿಯಿಂದ ರಕ್ತದಲ್ಲಿ ಪತ್ರ – ಗರಂ ಆದ ಕಿಚ್ಚ

Published

on

ಬೆಂಗಳೂರು: ಅಭಿಮಾನಿಗಳು ತನ್ನ ನೆಚ್ಚಿನ ನಟ-ನಟಿಯರಿಗೆ ಪತ್ರ ಬರೆಯುವುದು ಸಾಮಾನ್ಯವಾಗಿದೆ. ಆದರೆ ಯುವತಿಯೊಬ್ಬಳು ನಟ ಕಿಚ್ಚ ಸುದೀಪ್ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಸೌಮ್ಯಾ ಎಂಬಾಕೆ ಸುದೀಪ್‍ಗಾಗಿ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಸುದೀಪ್ ಅವರನ್ನು ನೋಡಬೇಕು ಎಂಬ ಆಸೆಯನ್ನು ಪತ್ರದಲ್ಲಿ ವ್ಯಕ್ತಪಡಿದ್ದಾರೆ. ಆದರೆ ಸೌಮ್ಯ ಬರೆದ ಪತ್ರವನ್ನು ನೋಡಿ ಕೋಪ ಮಾಡಿಕೊಂಡು ಮತ್ತೆ ರೀತಿ ಮಾಡಬೇಡಿ ಎಂದು ಕಿಚ್ಚ ಸುದೀಪ್ ತಿಳಿ ಹೇಳಿದ್ದಾರೆ.

ಪತ್ರದಲ್ಲಿ ಏದಿದೆ?
ನನ್ನ ಹೆಸರು ಸೌಮ್ಯ. ನನಗೆ ತಂದೆ ತಾಯಿ ಇಲ್ಲ. ಅಂದರೆ ತೀರಿಕೊಂಡಿದ್ದಾರೆ. ನಾನು ನಿಮ್ಮ ಭೇಟಿಗಾಗಿ ತುಂಬಾ ಪ್ರಯತ್ನ ಪಟ್ಟಿದ್ದೀನಿ. ಆದರೆ ಭೇಟಿಯಾಗಲೂ ಸಾಧ್ಯವಾಗಿಲ್ಲ. ಅದಕ್ಕೆ ಈಗ ನನ್ನ ರಕ್ತದಲ್ಲಿ ಈ ಪತ್ರ ಬರೀತಿದ್ದೀನಿ. ನನಗೆ ನಿಮ್ಮ ಸಂಘ ಮತ್ತು ನಿಮ್ಮ ಜೊತೆ ಇರುವ ಒಬ್ಬ ವ್ಯಕ್ತಿಯನ್ನು ನಿಮ್ಮನ್ನು ಭೇಟಿ ಮಾಡಿಸುವಂತೆ ತುಂಬಾ ಕೇಳಿಕೊಂಡೆ. ಆದರೆ ಅವರಿಂದ ನಿರಾಸೆ-ನೋವು ಜಾಸ್ತಿಯಾಗಿದೆ. ಹೀಗಾಗಿ ಈ ನನ್ನ ಪ್ರಯತ್ನಕ್ಕೆ ದಯವಿಟ್ಟು ನೀವೇ ಒಂದು ದಿನ ನನ್ನನ್ನು ಭೇಟಿ ಮಾಡಬೇಕು. ನೀವೇ ದಿನಾಂಕವನ್ನು ಹೇಳಿ. ರಾಕೇಶ್ ಮತ್ತು ಮಂಜಣ್ಣ ದಾವಣಗೆರೆ ಇವರಿಗೆ ನಾನು ಗೊತ್ತು ಎಂದು ಬರೆದಿದ್ದಾರೆ.

ಈ ಪತ್ರವನ್ನು ಸುದೀಪ್ ಅವರ ಅಭಿಮಾನಿ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿ ಪತ್ರವನ್ನು ನೋಡಿ ಸುದೀಪ್ ಅವರು, “ಅವರ ಅಭಿಮಾನ ನೋಡಿ ನನಗೆ ಖುಷಿಯಾಯಿತು. ಆದರೆ ರಕ್ತದಲ್ಲಿ ಪತ್ರ ಬರೆದಿದ್ದು ನೋಡಿ ನೋವಾಯಿತು. ಸೌಮ್ಯಾ ಅವರ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಖಂಡಿತ ನಾನು ಶೀಘ್ರದಲ್ಲಿಯೇ ನಿಮ್ಮನ್ನು ಭೇಟಿಯಾಗುತ್ತೇನೆ. ಆದರೆ ದಯವಿಟ್ಟು ಹೀಗೆಲ್ಲ ಯಾರೂ ಮಾಡಬೇಡಿ. ನನ್ನ ಮಾತಿನ ಮೇಲೆ ಗೌರವ ಇದ್ದರೆ ಇನ್ನೊಮ್ಮೆ ಈ ರೀತಿ ಮಾಡಬೇಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv