Exclusive: ನಕಲಿ ಔಷಧಿ ಜಾಲ 5 ರಾಜ್ಯಗಳಿಗೆ ಲಿಂಕ್‌

1 Min Read

– ಐದು ರಾಜ್ಯಗಳಿಗೆ ಭೇಟಿ ನೀಡಲಿರೋ ತನಿಖಾ ತಂಡ

ಬೆಂಗಳೂರು: ನಕಲಿ ಔಷಧಿ ಜಾಲ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಈ ಜಾಲ ಐದು ರಾಜ್ಯಗಳಿಗೆ ಲಿಂಕ್‌ ಇರುವುದು ತನಿಖೆಯಿಂದ ಬಯಲಾಗಿದೆ.

ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನ್ನೈ, ಆಂಧ್ರಪ್ರದೇಶ ರಾಜ್ಯಗಳಿಗೆ ನಕಲಿ ಔಷಧಿ ಜಾಲ ಲಿಂಕ್‌ ಇರುವ ಬಗ್ಗೆ ತಿಳಿದುಬಂದಿದೆ.

5 ರಾಜ್ಯಗಳಲ್ಲಿ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡ್ರಗ್‌ ಕಂಟ್ರೋಲರ್‌ಗಳ ಐದು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಈ ತನಿಖಾ ತಂಡಗಳು ಐದು ರಾಜ್ಯಗಳಿಗೆ ಭೇಟಿ ನೀಡಲಿವೆ.

ಐದು ರಾಜ್ಯಗಳ ಕಂಪನಿಯ ಲೇಬಲ್ ಇರೋದು ಬಯಲಾಗಿದೆ. ಪ್ರಕರಣ ಸಂಬಂಧ ಅಧಿಕಾರಿಗಳು ಐದು ರಾಜ್ಯಗಳಿಂದ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಐದು ರಾಜ್ಯದ ಕಂಪನಿಗಳಿಗೂ ಲೆಟರ್ ಹೆಡ್ ರೆಡಿ ಮಾಡಿ ಮಾಹಿತಿ ಕೋರಲಿದ್ದಾರೆ.

ಔಷಧಿ ಮೇಲೆ ನಿಮ್ಮ ಕಂಪನಿಯ ಲೇಬಲ್ ಇದ್ದು, ಅನಧಿಕೃತವಾಗಿ ಪ್ಯಾಕಿಂಗ್ ಆಗ್ತಿದೆಯಾ ಎಂಬ ಬಗ್ಗೆ ತನಿಖೆ ನಡೆಯಲಿದೆ.

Share This Article
Exit mobile version