Connect with us

Crime

ನಿರ್ಮಾಪಕನ ಜೊತೆ ಸೇರಿ ಕಾರ್ ಕಳ್ಳತನಕ್ಕಿಳಿದಿದ್ದ ನಟ ಅರೆಸ್ಟ್

Published

on

– ಇಬ್ಬರಿಂದ 50 ಲಕ್ಷ ನಕಲಿ ಹಣ ವಶ
– ಒಂದು ಅಸಲಿ ನೋಟಿಗೆ, ಮೂರು ನಕಲಿ ನೋಟು

ನವದೆಹಲಿ: ಕಾರ್ ಕಳ್ಳತನ ಪ್ರಕರಣದಲ್ಲಿ ಆಗ್ನೇಯ ದೆಹಲಿ ಪೊಲೀಸರು ಭೋಜಪುರಿ ಸಿನಿಮಾ ನಟ ಮತ್ತು ನಿರ್ಮಾಪಕನನ್ನು ಬಂಧಿಸಿದ್ದಾರೆ. ಬಂಧಿತರಿಂದ 51 ಲಕ್ಷ ಮೌಲ್ಯದ ನಕಲಿ ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ ಸಿಂಗ್ ಉರ್ಫ್ ಮೊಹಮ್ಮದ್ ಶಾಹಿದ್ ಮತ್ತು ಸೈಯದ್ ಜೈನ್ ಹುಸೈನ್ ಬಂಧಿತ ಆರೋಪಿಗಳು. ಇಬ್ಬರು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯ ಮಾರುಕಟ್ಟೆ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜಾಮಿಯಾ ಬಳಿ ಕಳ್ಳತನವಾಗಿದ್ದ ಸ್ಕೂಟಿಯನ್ನ ಇವರ ಬಳಿ ವಶಕ್ಕೆ ಪಡೆದಿದ್ದಾರೆ. ಮಕ್ಕಳ ಆಟಿಕೆ ಹಣ ಸೇರಿದಂತೆ 100, 2 ಸಾವಿರ, 200 ಮತ್ತು 50 ರೂ. ಮುಖಬೆಲೆಯ ನಕಲಿ ಹಣ ಪತ್ತೆಯಾಗಿದೆ.

ಬಂಧಿತ ಶಾಹಿದ್ ಅಲಹಬಾದ್ ಟು ಅಲಹಬಾದ್ ಸಿನಿಮಾವನ್ನು ನಿರ್ಮಾಣ ಮಾಡಿದ್ದನು. ದೆಹಲಿಯ ಆಶ್ರಮ ಇಲಾಖೆಯಲ್ಲಿ ಸಾಹಿಲ್ ಸನ್ನಿ ಹೆಸರಿನ ಪ್ರೊಡೆಕ್ಷನ್ ಹೌಸ್ ಹೊಂದಿದ್ದಾನೆ. ವೇಗವಾಗಿ ಹಣ ಮಾಡೋ ಉದ್ದೇಶದಿಂದ ನಕಲಿ ನೋಟುಗಳನ್ನ ಮಾರುಕಟ್ಟೆಯಲ್ಲಿ ಸರಬರಾಜು ಮಾಡುತ್ತಿದ್ದ ಎಂದು ಡಿಸಿಪಿ ಆರ್.ಪಿ.ಮೀನಾ ಹೇಳಿದ್ದಾರೆ.

ಸಾರ್ವಜನಿಕರೊಂದಿಗೆ ಮೂರು ನಕಲಿ ನೋಟು ನೀಡಿ ಒಂದು ಅಸಲಿ ನೋಟು ಪಡೆದುಕೊಳ್ಳುವ ಒಪ್ಪಂದವನ್ನ ಮಾಡಿಕೊಳ್ಳುತ್ತಿದ್ದರು. ಲಾಕ್‍ಡೌನ್ ವೇಳೆ ಖಾಲಿ ಕುಳಿತಿದ್ದ ಸೈಯದ್ ಹುಸೈನ್ ಸಹ ಹಣಕ್ಕಾಗಿ ಶಾಹಿದ್ ಜೊತೆ ಕೈ ಜೋಡಿಸಿದ್ದನು. ಇಬ್ಬರು ಜೊತೆಯಾಗಿ ಕಾರ್, ಸ್ಕೂಟಿ ಕಳ್ಳತನಕ್ಕಿಳಿದಿದ್ದರು ಎಂದು ಆರ್.ಪಿ.ಮೀನಾ ಮಾಹಿತಿ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *