Saturday, 19th October 2019

Recent News

ಧೋನಿ ಔಟಾಗುತ್ತಿದಂತೆ ಕಣ್ಣೀರಿಟ್ಟ ಫೋಟೋಗ್ರಾಫರ್ – ಬಯಲಾಯ್ತು ಫೋಟೋ ಹಿಂದಿನ ನೈಜ ಕಹಾನಿ

ಬೆಂಗಳೂರು: ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಅಭಿಮಾನಿಗಳಿಗೆ ಭಾರೀ ಶಾಕ್ ನೀಡಿತ್ತು. ಆದರೆ ಧೋನಿ ಔಟಾಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಇದರಲ್ಲಿ ಪಂದ್ಯವನ್ನು ಕವರೇಜ್ ಮಾಡುತ್ತಿದ್ದ ಫೋಟೋಗ್ರಾಫರ್ ಅಳುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು.

ಈ ಫೋಟೋ ನೈಜತೆಯ ಕುರಿತು ಫ್ಯಾಕ್ಟ್ ಚೇಕ್ ಮಾಡುವ ಸಂದರ್ಭದಲ್ಲಿ ಇದು ಫೋಟೋಶಾಪ್ ಮಾಡಿದ ಫೋಟೋ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅಂದಹಾಗೇ ಫೋಟೋದಲ್ಲಿರುವ ವ್ಯಕ್ತಿ ಅಳುತ್ತಿರುವುದು ನಿಜವೇ ಆದರೂ ಆ ಘಟನೆ ನಡೆದಿದ್ದು ಜನವರಿಯಲ್ಲಿ ನಡೆದ ಏಷ್ಯಾ ಫುಟ್ಬಾಲ್ ಕಪ್ ಟೂರ್ನಿಯಲ್ಲಿ.

ಇರಾಕ್ ದೇಶದ ಫೋಟೋಗ್ರಾಫರ್ ತನ್ನ ದೇಶ ಟೂರ್ನಿಯಲ್ಲಿ ಸೋಲುಂಡ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದರು. ಈ ಫೋಟೋಗೆ ಧೋನಿ ಔಟಾದ ಬಳಿಕ ಫೆವಿಲಿಯನ್ ಕಡೆ ತರಳುತ್ತಿರುವ ಫೋಟೋವನ್ನು ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಅಲ್ಲದೇ ಧೋನಿ ಔಟಾಗುತ್ತಿದಂತೆ ಕ್ರೀಡಾಂಗಣದಲ್ಲಿದ್ದ ಫೋಟೋಗ್ರಾಫರ್ ಕಣ್ಣೀರಿಟ್ಟಿದ್ದಾರೆ ಎಂದು ಹಣೆಬರಹ ನೀಡಲಾಗಿತ್ತು. ಇದನ್ನು ಕಂಡ ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ವೈರಲ್ ಮಾಡಿದ್ದರು.

Leave a Reply

Your email address will not be published. Required fields are marked *