Connect with us

Latest

ಎಫ್‍ಬಿ ವಿಶೇಷ ಲಾಕ್ ಫೀಚರ್ – ಭಾರತದ ಬಳಕೆದಾರರಿಗೆ ಮಾತ್ರ ಲಭ್ಯ

Published

on

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಂಬರ್ ಒನ್ ಆಗಿರುವ ಫೇಸ್‍ಬುಕ್ ಭಾರತೀಯ ಬಳಕೆದಾರರಿಗೆ ಮಾತ್ರ ವಿಶೇಷ ಪ್ರೈವೆಸಿಯನ್ನು ಫೀಚರ್ ನೀಡಲು ಮುಂದಾಗುತ್ತಿದೆ.

ಇಲ್ಲಿಯವರೆಗೆ ಫೇಸ್‍ಬುಕ್‍ನಲ್ಲಿ ಫ್ರೆಂಡ್ಸ್ ಆಗದೇ ಇದ್ದರೂ ಅವರ ವಾಲ್ ನಲ್ಲಿ ಬರೆದ ಪೋಸ್ಟ್, ಫೋಟೋಗಳನ್ನು ವೀಕ್ಷಿಸಬಹುದಾಗಿತ್ತು. ಆದರೆ ಈಗ ಸಂಪೂರ್ಣವಾಗಿ ಪ್ರೊಫೈಲ್ ಲಾಕ್ ಮಾಡುವ ಫೀಚರ್ ನೀಡಲಿದೆ.

ಯಾರೆಲ್ಲ ಈ ಲಾಕ್ ಫೀಚರ್ ಆಯ್ಕೆ ಮಾಡುತ್ತಾರೋ ಅವರ ಪ್ರೊಫೈಲಿನಲ್ಲಿರುವ ಫೋಟೋಗಳು ಸ್ನೇಹಿತರಿಗೆ ಮಾತ್ರ ಕಾಣುತ್ತದೆ. ಬೇರೆ ಯಾರಿಗೂ ಫೋಟೋಗಳು, ಪೋಸ್ಟ್ ಗಳು ಕಾಣಿಸುವುದಿಲ್ಲ. ಅಷ್ಟೇ ಅಲ್ಲದೇ ಈ ಆಯ್ಕೆಯನ್ನು ಮಾಡುವ ಬಳಕೆದಾರರ ಪ್ರೊಫೈಲ್ ಫೋಟೋ ಮತ್ತು ಕವರ್ ಫೋಟೋವನ್ನು ಝೂಮ್ ಮಾಡಲು ಮತ್ತು ಡೌನ್‍ಲೋಡ್ ಮಾಡಲು ಸಾಧ್ಯವಿಲ್ಲ.

We know you love sharing your photos and posts with friends, but do you want to be in control of who sees your…

Posted by Facebook on Thursday, May 21, 2020

ಬಳಕೆದಾರರಿಗೆ ಹೊಸ ಸುರಕ್ಷಾ ಫೀಚರ್ ನೀಡುತ್ತಿದ್ದೇವೆ. ಈ ಫೀಚರ್ ನಿಂದ ಪ್ರೊಫೈಲ್ ಲಾಕ್ ಮಾಡಬಹುದಾಗಿದೆ. ವಿಶೇಷವಾಗಿ ಭಾರತದ ಬಳಕೆದಾರರಿಗೆ ಅದರಲ್ಲೂ ಫೇಸ್‍ಬುಕ್ ಬಳಕೆಯಲ್ಲಿ ನಿಯಂತ್ರಣ ಇರಬೇಕೆಂದು ಬಯಸುವ ಮಹಿಳೆಯರಿಗಾಗಿ ಈ ಫೀಚರ್ ನೀಡಲಾಗಿದೆ ಎಂದು ಫೇಸ್‍ಬುಕ್ ತಿಳಿಸಿದೆ.

ಲಾಕ್ ಮಾಡುವುದು ಹೇಗೆ?
ನಿಮ್ಮ ಹೆಸರಿನ ಮೇಲೆ ಒತ್ತಿ ಆಗ ಅಲ್ಲಿ ಲಾಕ್ ಪ್ರೊಫೈಲ್ ಆಯ್ಕೆ ಕಾಣುತ್ತದೆ. ಲಾಕ್ ಆಯ್ಕೆಯನ್ನು ಒತ್ತಿ ಕನ್ಫರ್ಮ್ ಮಾಡಿದ್ರೆ ಲಾಕ್ ಆಗುತ್ತದೆ. ಒಮ್ಮೆ ಲಾಕ್ ಮಾಡಿ ನಂತ್ರ ನೀವು ಅಪ್ಲೋಡ್ ಮಾಡುವ ಪೋಸ್ಟ್/ ಫೋಟೋಗಳು ಪಬ್ಲಿಕ್ ಆಗುವುದಿಲ್ಲ. ಎಲ್ಲರಿಗೂ ಕಾಣಿಸಬೇಕಿದ್ದರೆ ನೀವು ಪ್ರೊಫೈಲಿಗೆ ಹೋಗಿ ಅನ್ ಲಾಕ್ ಮಾಡಬೇಕಾಗುತ್ತದೆ.

ಈಗಲೂ ಪೋಸ್ಟ್ ಗಳು ಸಾರ್ವಜನಿಕರಿಗೆ ಕಾಣಬೇಕೇ ಬೇಡವೇ ಎಂಬ ಆಯ್ಕೆ ಇದೆ. ಈ ಆಯ್ಕೆಯಲ್ಲಿ ಸ್ನೇಹಿತರಿಗೆ ಮಾತ್ರ ಆಯ್ಕೆಯನ್ನು ಆರಿಸಿಕೊಂಡರೆ ಸ್ನೇಹಿತರಿಗೆ ಮಾತ್ರ ಪೋಸ್ಟ್ ಕಾಣುತ್ತದೆ. ಹೀಗಿದ್ದರೂ ಎಲ್ಲ ಬಳಕೆದಾರರಿಗೆ ಲಭ್ಯ ಇರುವ ಪೇಜ್‍ಗಳಲ್ಲಿರುವ ಪೋಸ್ಟ್ ಗಳನ್ನು ವಾಲ್ ನಲ್ಲಿ ಶೇರ್ ಮಾಡಿದ್ರೆ ಸ್ನೇಹಿತರಲ್ಲದವರಿಗೂ ಇದು ಕಾಣುತ್ತದೆ. ಈಗ ಪ್ರೊಫೈಲ್ ಲಾಕ್ ಮಾಡಿದ್ರೆ ಬಳಕೆದಾರರ ಖಾತೆಯಲ್ಲಿರುವ ಯಾವುದೇ ಪೋಸ್ಟ್ ಗಳನ್ನು ನೋಡಲು ಸಾಧ್ಯವಿಲ್ಲ.

ಹೊಸ ಪ್ರೈವೆಸಿ ಫೀಚರ್ ಈಗಲೇ ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಫೇಸ್‍ಬುಕ್ ಅಪ್‍ಡೇಟ್ ನೀಡಿದ ಬಳಿಕ ಬಳಕೆದಾರರಿಗೆ ಲಭ್ಯವಾಗಲಿದೆ.

ವಿಶ್ವದಲ್ಲೇ ಫೇಸ್‍ಬುಕ್ ಗೆ ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಬಳಕೆದಾರರು ಭಾರತದಲ್ಲಿ ಇದ್ದಾರೆ. ಭಾರತ 28 ಕೋಟಿ, ಅಮೆರಿಕ 19 ಕೋಟಿ, ಇಂಡೋನೇಷ್ಯಾ 13 ಕೋಟಿ, ಬ್ರೆಜಿಲ್ 12 ಕೋಟಿ ಬಳಕೆದಾರರಿದ್ದಾರೆ.