Tuesday, 10th December 2019

ಈಗ ಫೇಸ್‍ಬುಕ್ ಖಾತೆ ತೆರೆಯಲು ಬಂತು ಆಧಾರ್!

ಬೆಂಗಳೂರು: ಸಿಮ್ ಕಾರ್ಡ್, ಪಾನ್ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ ಆಗಿದ್ದು ಈಗ ಫೇಸ್ ಬುಕ್ ನಲ್ಲೂ ಆಧಾರ್ ಬಂದಿದೆ.

ಹೌದು. ಭಾರತದಲ್ಲಿ ಹೊಸದಾಗಿ ಖಾತೆ ತೆರೆಯುವ ಬಳಕೆದಾರರಿಗೆ ಆಧಾರ್ ನಲ್ಲಿ ನೀವು ಯಾವ ಹೆಸರು ನೀಡಿದ್ದಿರೋ ಆ ಹೆಸರನ್ನೇ ಖಾತೆಗೆ ನೀಡಿ ಎಂದು ಫೇಸ್‍ಬುಕ್ ಹೇಳುತ್ತಿದೆ.

ಹಾಗೆಂದ ಮಾತ್ರಕ್ಕೆ ಆಧಾರ್ ನಲ್ಲಿ ಏನು ಹೆಸರು ನಮೂದಿಸಿದ್ದೀರೋ ಅದೇ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಫೇಸ್‍ಬುಕ್ ಹೇಳಿಲ್ಲ. ಆಧಾರ್ ನಲ್ಲಿರುವ ಹೆಸರನ್ನು ನಮೂದಿಸಿದರೆ ನಿಮ್ಮ ಸ್ನೇಹಿತರಿಗೆ ನಿಮ್ಮನ್ನು ಹುಡುಕಲು ಸುಲಭವಾಗುತ್ತದೆ. ಈ ಕಾರಣಕ್ಕೆ ಆಧಾರ್ ಗೆ ನೀಡಿದ ಹೆಸರನ್ನು ನಮೂದಿಸಿದರೆ ಉತ್ತಮ ಎಂದು ಹೇಳಿದೆ.

ಆಧಾರ್ ಗೆ ನೀಡಿರುವ ಹೆಸರನ್ನು ಮಾತ್ರ ಖಾತೆ ತೆರೆಯುವಾಗ ನಮೂದಿಸಿದರೆ ಸಾಕು. ಆಧಾರ್ ಕಾರ್ಡ್ ಪಡೆಯಲು ನೀಡಬೇಕಾದ ಇತ್ಯಾದಿ ಮಾಹಿತಿಗಳನ್ನು ನೀಡುವ ಅಗತ್ಯವಿಲ್ಲ.

ಅಮೆರಿಕ ಬಿಟ್ಟರೆ ಫೇಸ್‍ಬುಕ್‍ಗೆ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರಿದ್ದು ಮತ್ತಷ್ಟು ಬಳಕೆದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಆಯಾ ದೇಶದ ಜನರಿಗೆ ಮಾತ್ರ ವಿಶೇಷ ಸೇವೆ ನೀಡಲು ಫೇಸ್‍ಬುಕ್ ಈಗ ಮುಂದಾಗುತ್ತಿದೆ.

2016ರಲ್ಲಿ ಭಾರತದಲ್ಲಿ ಎಕ್ಸ್ ಪ್ರೆಸ್ ವೈಫೈ ಯನ್ನು ಫೇಸ್‍ಬುಕ್ ಆರಂಭಿಸಿತ್ತು. ಗ್ರಾಮೀಣ ಭಾಗದಲ್ಲಿ 125 ಹಾಟ್ ಸ್ಪಾಟ್ ಗಳನ್ನು ತೆರೆದು ವೇಗದ ಇಂಟರ್ ನೆಟ್ ನೀಡಲು ಈ ಸೇವೆಯನ್ನು ಆರಂಭಿಸಿತ್ತು. ಇದನ್ನೂ ಓದಿ: ‘ಲೈಕ್ಸ್’ ಗಾಗಿ ಫೇಸ್‍ಬುಕ್‍ನಲ್ಲಿ ಸೆಕ್ಸ್ ವಿಡಿಯೋ ಲೈವ್ ಮಾಡ್ದ- ಸ್ಟೋರಿಯಲ್ಲಿ ಮತ್ತೊಂದು ಟ್ವಿಸ್ಟ್

ಇದೇ ನವೆಂಬರ್ ನಲ್ಲಿ 2020ರ ಒಳಗಡೆ ಭಾರತದ 5 ಲಕ್ಷ ಮಂದಿಗೆ ಡಿಜಿಟಲ್ ಕೌಶಲ್ಯದ ಬಗ್ಗೆ ತರಬೇತಿ ನೀಡಲು ಎರಡು ವಿಶೇಷ ಕಾರ್ಯಕ್ರಮವನ್ನು ಆರಂಭಿಸುತ್ತಿರುವುದಾಗಿ ಹೇಳಿತ್ತು.

Leave a Reply

Your email address will not be published. Required fields are marked *