ನಿಶ್ಚಿತಾರ್ಥ ಅಲ್ಲ, ನಮ್ಗೂ ಸರ್ಪ್ರೈಸ್ ಆಗಿದೆ- ನಿವೇದಿತಾ ಹೆತ್ತವರು

Advertisements

ಮೈಸೂರು: ಯುವ ದಸರಾ ವೇದಿಕೆಯಲ್ಲಿ ಚಂದನ್‍ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಎಂಗೇಜ್‍ಮೆಂಟ್ ಆಗಿಲ್ಲ, ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ನಿವೇದಿತಾ ಗೌಡ ಪೋಷಕರು ತಿಳಿಸಿದ್ದಾರೆ.

Advertisements

ಯುವ ದಸರಾ ವೇದಿಕೆಯಲ್ಲೇ ನಿವೇದಿತಾ ಗೌಡಾಗೆ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ನಮಗೆ ಸರ್ಪ್ರೈಸ್ ತಂದಿದೆ. ನಾವು ಕಾರ್ಯಕ್ರಮ ನೋಡಲೆಂದು ಹೋಗಿದ್ದೇವೆ ಅಷ್ಟೇ. ಅಲ್ಲಿ ಈ ರೀತಿ ಆಗಿರೋದು ಆಶ್ಚರ್ಯದ ಜೊತೆಗೆ ಖುಷಿಯನ್ನು ಕೂಡ ತಂದಿದೆ ಎಂದಿದ್ದಾರೆ.

ಇದನ್ನು ನಿಶ್ಚಿತಾರ್ಥ ಎಂದು ಹೇಳಲಾಗುವುದಿಲ್ಲ. ಇದೊಂದು ಸರ್ಪ್ರೈಸ್ ಅಷ್ಟೇ. ನಮಗೂ ಗೊತ್ತಿರಲಿಲ್ಲ. ಇದ್ದಕ್ಕಿಂದತೆಯೇ ಇದು ನಡೆದು ಹೋಗಿದೆ. ಹೀಗಾಗಿ ನಮಗೂ ಅಲ್ಲೇ ಗೊತ್ತಾಗಿರೋದು. ಯುವದಸರಾದಲ್ಲಿ ನಡೆದಿರುವುದನ್ನು ನೋಡಿ ನನಗೂ ತುಂಬಾ ಸಂತೋಷ ಆಯಿತು. ಅಲ್ಲಿ ನೆರೆದಿದ್ದ ಎಲ್ಲ ಜನರೂ ಇದನ್ನು ಇಷ್ಟಪಟ್ಟರು. ನಮ್ಮಲ್ಲಿಯೂ ಬಂದು ಕೆಲವರು ಖುಷಿಯಾಯಿತು ಎಂದು ನಿವೇದಿತಾ ತಾಯಿ ಹೇಳಿದರು.

Advertisements

ಚಂದನ್ ಅವರನ್ನು ಲವ್ ಮಾಡುತ್ತಿದ್ದೇನೆ ಎಂದು ನಿವೇದಿತಾ ಯಾವತ್ತೂ ಹೇಳಿರಲಿಲ್ಲ. ಆದರೆ ಇದಕ್ಕೂ ಮೊದಲು ಚಂದನ್ ಹೆತ್ತವರು ,ನಾವು ಒಂದು ಬಾರಿ ಮಾತನಾಡಿದ್ದೆವು. ಅದು ಬಿಟ್ಟರೆ ಪೂರ್ತಿಯಾಗಿ ಈ ಬಗ್ಗೆ ಚರ್ಚೆ ನಡೆಸಿರಲಿಲ್ಲ ಎಂದರು.

ಇದೇ ವೇಳೆ ನಿವೇದಿತಾ ತಂದೆ ಮಾತನಾಡಿ, ಯುವಕರಲ್ವ ಹೀಗಾಗಿ ಅವರು ಯುವದಸರಾದಲ್ಲಿ ಪ್ರಪೋಸ್ ಮಾಡಿದ್ದಾರೆ. ಇದರಿಂದ ನಮಗೂ ತುಂಬಾ ಖುಷಿಯಾಯಿತು. ಆದರೆ ಅದರ ಬಗ್ಗೆ ನಮಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು.

Advertisements

ಬಿಗ್ ಬಾಸ್ ಬಳಿಕ ಅವರ ಕುಟುಂಬದೊಂದಿಗೆ ಒಳ್ಳೆಯ ಒಡನಾಟ ಇದೆ. ಹೀಗಾಗಿ ಚಂದನ್ ಬಗ್ಗೆ ತಿಳಿದುಕೊಂಡಿದ್ದೇವೆ. ಲವ್ ಮಾಡುತ್ತಿದ್ದಾರೆ ಎಂದು ಗೊತ್ತಿರಲಿಲ್ಲ. ಆದರೆ ಒಂದು ಬಾರಿ ಜಸ್ಟ್ ಮಾತಾಡಿದ್ದೆವು. ಮದುವೆ ಕಾರ್ಯಕ್ರಮದ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಸಬೇಕು ಎಂದು ಹೇಳಿದರು.

ದಸರಾ ವೇದಿಕೆಯಲ್ಲಿ ಜನರ ದುಡ್ಡಿನಲ್ಲಿ ಈ ರೀತಿ ಮಾಡಿರುವುದು ತಪ್ಪು ಎಂಬ ಟೀಕೆಗಳಿಗೆ ಉತ್ತರಿಸಿದ ಅವರು, ಆ ಕ್ಷಣದಲ್ಲಿ ಅವರ ತಲೆಯಲ್ಲಿ ಏನು ಬಂತೋ ಅದನ್ನು ಚಂದನ್- ನಿವೇದಿತಾ ಮಾಡಿದ್ದಾರೆ. ಇದು ಕೆಲವರಿಗೆ ಇಷ್ಟವಾಗಿದೆ. ಇನ್ನೂ ಕೆಲವರಿಗೆ ಇಷ್ಟವಾಗಿಲ್ಲ ಎಂದರು.

ಯುವ ದಸರಾ ಸಂದರ್ಭದಲ್ಲಿ ಗಾಯಕ ಚಂದನ್ ಶೆಟ್ಟಿ, ನಿವೇದಿತಾ ಗೌಡಾಗೆ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ್ದರು. ಈ ವಿಚಾರ ಸಾಕಷ್ಟು ವಿವಾಕ್ಕೀಡಾಗಿದ್ದು, ನನ್ನದು ತಪ್ಪಾಗಿದ್ದರೆ ಕ್ಷಮಿಸಿಬಿಡಿ ಎಂದು ಚಂದನ್ ಪ್ರತಿಕ್ರಿಯಿಸಿದ್ದರು. ಆದರೆ ಈ ಸಂಬಂಧ ಮಾತನಾಡಿದ, ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಆರು ತಿಂಗಳಲ್ಲಿ ಆ ತಾಯಿ ಅವರಿಗೆ ಏನು ತೀರ್ಮಾನ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಾರೆ. ಇದೊಂದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.

Advertisements
Exit mobile version