Bengaluru CityKarnatakaLatestMain Post

Exclusive: ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು

– ಯಾರ ಕಾಲಿಗೆ ಬೀಳುವ ಪರಿಸ್ಥಿತಿ ನಮ್ಮ ಲೈಫ್‍ನಲ್ಲಿ ಬಂದಿಲ್ಲ
– ನಿಜಕ್ಕೂ ಆವತ್ತು ನಡೆದಿದ್ದೇನು?

ಬೆಂಗಳೂರು:  ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ಹರ್ಷ ಮೇಲಂಟಾ ಮೊದಲ ಬಾರಿಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ವೇಟರ್ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ದಿನದಂದು ಉದ್ಯಮಿ ಹರ್ಷ ಮೇಲಂಟಾ ಸಹ ಜೊತೆಯಲ್ಲಿದ್ದರು. ಆವತ್ತು ನಿಜಕ್ಕೂ ಹೋಟೆಲ್ ನಲ್ಲಿ ನಡೆದಿದ್ದೇನು? ಸಂದೇಶ್ ಅವರದ್ದು ಎನ್ನಲಾದ ಆಡಿಯೋ ಬಗ್ಗೆಯೂ ಹರ್ಷ ಮೆಲಂಟಾ ಮಾತನಾಡಿದ್ದಾರೆ.

ಬೈದಿದ್ದು ನಿಜ, ಹಲ್ಲೆ ಆಗಿಲ್ಲ:
ನಮ್ಮ ಕುಟುಂಬಕ್ಕೆ ದರ್ಶನ್ ಊಟಕ್ಕೆ ಆಹ್ವಾನಿಸಿದ್ದರು. ಹೋಟೆಲ್ ಗೆ ನಾನು ಮಕ್ಕಳು ಮತ್ತು ಪತ್ನಿ ಜೊತೆ ಹೋಗಿದ್ದೆ. ಆದ್ರೆ ಹೋಟೆಲ್ ಸರ್ವಿಸ್ ನಿಧಾನ ಆಗಿದ್ದರಿಂದ ದರ್ಶನ್ ಸಿಬ್ಬಂದಿ ಮೇಲೆ ಕೋಪಗೊಂಡು ಬೈದರು. ದರ್ಶನ್ ಕೋಪಗೊಳ್ಳುತ್ತಿದ್ದಂತೆ ಅಲ್ಲಿಗೆ ಸಂದೇಶ್ ಬಂದು, ನಮ್ಮ ಕುಟುಂಬವನ್ನು ರೂಮಿಗೆ ಹೋಗುವಂತೆ ಕಳುಹಿಸಿದರು. ದರ್ಶನ್ ಸಿಬ್ಬಂದಿಗೆ ಬೈದಿದ್ದು ನಿಜ ಆದ್ರೆ ಹಲ್ಲೆ ನಡೆಸಿಲ್ಲ. ಬೆಳಗ್ಗೆ ಎಲ್ಲರೂ ತಿಂಡಿ ಬಂದು ಹೋಟೆಲ್ ನಿಂದ ಬಂದಿದ್ದೇವೆ.

ಆಡಿಯೋ ಬಗ್ಗೆ ಗೊಂದಲ:
ಮಾಧ್ಯಮಗಳಲ್ಲಿ ಬಿತ್ತರವಾದ ಆಡಿಯೋ ನನ್ನ ಗಮನಕ್ಕೂ ಬಂದಿದೆ. ಆದ್ರೆ ಸಂದೇಶ್ ಆ ರೀತಿ ಮಾತನಾಡಿದ್ದಾರೆ ಅಂದ್ರೆ ನಂಬಲು ಆಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ನನ್ನ ಜೊತೆ ಬ್ಯುಸಿನೆಸ್ ಮಾಡಲು ಸಂದೇಶ್ ಮುಂದಾಗಿದ್ದಾರೆ. ಈ ಸಂಬಂಧ ಎರಡ್ಮೂರು ಬಾರಿ ಮಾತುಕತೆ ಸಹ ನಡೆದಿದೆ. ಒಂದು ವೇಳೆ ನಾನು ಪೋಲಿ, ಸಾಲಗಾರ, ಮೋಸಗಾರನಾಗಿದ್ರೆ ನನ್ನೊಂದಿಗೆ ಸಂದೇಶ್ ವ್ಯವಹಾರಕ್ಕೆ ಮುಂದಾಗುತ್ತಿರಲಿಲ್ಲ. ಆಡಿಯೋ ಬಗ್ಗೆ ಸಂದೇಶ್ ಬಳಿಯೇ ಸ್ಪಷ್ಟನೆ ತೆಗೆದುಕೊಳ್ಳುವದಾಗಿ ಹೇಳಿದ್ರು. ಇದನ್ನೂ ಓದಿ: ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

ಆ ಸ್ಥಿತಿ ಲೈಫ್‍ನಲ್ಲಿ ಬಂದಿಲ್ಲ:
ಇದುವರೆಗೂ ಯಾರ ಕಾಲಿಗೂ ಬೀಳುವ ಪರಿಸ್ಥಿತಿ ಬಂದಿಲ್ಲ. ನಾನೂ ಎಂದೂ ಸಂದೇಶ್ ಅವರನ್ನ ಅಣ್ಣ ಎಂದು ಕರೆದಿಲ್ಲ. ಬಹುವಚನದಲ್ಲಿ ಸಂದೇಶ್ ಅವರೇ ಅಂತಾನೇ ಕರೆಯುತ್ತೇನೆ. ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್. ಪೊಲೀಸರ ಮೇಲೆ ನಂಬಿಕೆ ಇದೆ. ತನಿಖೆ ನಡೆಯಲಿ ಎಂದು ಹೇಳುವ ಮೂಲಕ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದರು. ಇದನ್ನೂ ಓದಿ: ನಾನು ದಲಿತ ಅಲ್ಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು: ಗಂಗಾಧರ್

Leave a Reply

Your email address will not be published. Required fields are marked *

Back to top button