Connect with us

Corona

ಲಾಕ್‍ಡೌನ್ ರೂಲ್ಸ್ ಬ್ರೇಕ್- ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ದಂಡ, ಕಾರ್ ಸೀಜ್

Published

on

ಚೆನ್ನೈ: ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ಕಾರಣ ಟೀಂ ಇಂಡಿಯಾ ಮಾಜಿ ಆಟಗಾರ ರಾಬಿನ್ ಸಿಂಗ್ ಅವರಿಗೆ 500 ರೂ. ದಂಡ ಹಾಗೂ ಅವರ ಕಾರನ್ನು ಸೀಜ್ ಮಾಡಲಾಗಿದೆ. ಚೆನ್ನೈನಲ್ಲಿ ತರಕಾರಿ ಖರೀದಿ ಮಾಡಲು ಕಾರಿನಲ್ಲಿ ತೆರಳಿದ್ದ ವೇಳೆ 56 ವರ್ಷದ ರಾಬಿನ್ ಸಿಂಗ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

ತಮಿಳುನಾಡು ಅದರಲ್ಲೂ ಚೆನ್ನೈನಲ್ಲಿ ಕೊರೊನಾ ಸೋಂಕಿನ ಅರ್ಭಟ ಹೆಚ್ಚಾಗಿದೆ. ಪರಿಣಾಮ ಅಲ್ಲಿನ ಸರ್ಕಾರ ಲಾಕ್‍ಡೌನ್ ಜಾರಿ ಮಾಡಿದೆ. ಪೊಲೀಸರು ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದಾರೆ. 2 ಕಿಮೀ ದೂರಕ್ಕಿಂತ ಯಾರದರೂ ಲಾಕ್‍ಡೌನ್ ಪ್ರದೇಶದಲ್ಲಿ ಪ್ರಯಾಣ ನಡೆಸಿದರೆ ಅವರಿಗೆ ದಂಡ ಹಾಗೂ ವಾಹನ ಸೀಜ್ ಮಾಡಲಾಗುತ್ತಿದೆ.

ಪೊಲೀಸರ ಪರಿಶೀಲನೆ ನಡೆಸುತ್ತಿದ್ದ ವೇಳೆ ರಾಬಿನ್ ಅವರ ಯಾವುದೇ ಇ-ಪಾಸ್ ಹಾಗೂ ನಿಖರ ಕಾರಣ ತಿಳಿಸದ ಕಾರಣ ದಂಡ ವಿಧಿಸಿದ್ದಾರೆ. ಚೆನ್ನೈ ಮತ್ತು ತಮಿಳುನಾಡಿನ ಮೂರು ಜಿಲ್ಲೆಗಳಲ್ಲಿ ಜೂನ್ 19 ರಿಂದ ಲಾಕ್‍ಡೌನ್ ಜಾರಿ ಮಾಡಲಾಗಿದೆ.

ಭಾರತ ಪರ ರಾಬಿನ್ ಸಿಂಗ್ 136 ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. 1999 ಏಕದಿನ ವಿಶ್ವಕಪ್ ಟೂರ್ನಿಯ ತಂಡದ ಸದಸ್ಯರಾಗಿದ್ದರು. ಅಲ್ಲದೇ ಫೀಲ್ಡಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.