Connect with us

Bengaluru City

ಗೆಳೆತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಆ್ಯಂಡಿ

Published

on

ಬೆಂಗಳೂರು: ಬಿಗ್‍ಬಾಸ್ ಸೀಸನ್-6 ಸ್ಪರ್ಧಿ ಆಂಡ್ರ್ಯೂ ಜಯಪಾಲ್ ಅವರು ತಮ್ಮ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಆ್ಯಂಡಿ ತಮ್ಮ ಗೆಳತಿ ಜನನಿ ಗಣೇಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಡಲಿದ್ದಾರೆ. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಜನನಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಕುಟುಂಬದವರು ಅನೇಕ ವರ್ಷಗಳಿಂದ ಪರಿಚಯವಿದ್ದು, ಜನನಿ ಹಾಗೂ ಆ್ಯಂಡಿ ಫ್ಯಾಮಿಲಿ ಫ್ರೆಂಡ್ ಆಗಿದ್ದಾರೆ.

ಮೊದಲು ಆ್ಯಂಡಿ ಹಾಗೂ ಜನನಿ ಸ್ನೇಹಿತರಾಗಿದ್ದರು. ಬಳಿಕ ಸ್ವತಃ ಆ್ಯಂಡಿ ರೊಮ್ಯಾಂಟಿಕ್ ಆಗಿ ಜನನಿಯ ಬಳಿ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಂಡಿದ್ದಾರೆ. ಜನನಿ ಕೂಡ ಆ್ಯಂಡಿ ಪ್ರೀತಿ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಇಬ್ಬರು ತಮ್ಮ ಮನೆಯವರಿಗೆ ಒಪ್ಪಿಸಿ 2020ರಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ.

ಆ್ಯಂಡಿ ತನ್ನ ಮದುವೆಯ ವಿಷಯ ಮಾತನಾಡಿ, ನಮ್ಮಿಬ್ಬರ ಕುಟುಂಬದವರು ನಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದೇವೆ. ಜನನಿ ನೋಡಲು ಮಾಡೆಲ್ ರೀತಿ ಇದ್ದಾರೆ. ಆದರೆ ನಾನು ಹೀಗೆ ಇದ್ದೇನೆ. ಆದರೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಆಗುತ್ತಿದ್ದೇವೆ. ಮದುವೆಗಾಗಿ ಖರ್ಚು ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಹಾಗಾಗಿ ಸಿಂಪಲ್ ಆಗಿ ಮದುವೆ ಆಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಆ್ಯಂಡಿ ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಆ್ಯಂಡಿ ಈಗ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಬಿಗ್‍ಬಾಸ್ ಮನೆಗೆ ಹೋದಾಗ ಆ್ಯಂಡಿ 145 ಕೆಜಿ ತೂಕ ಇದ್ದರು. ಆದರೆ ಈಗ ಅವರು ಜಿಮ್‍ಗೆ ಹೋಗಿ ಬರೋಬ್ಬರಿ 27 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.