Thursday, 14th November 2019

Recent News

ಈಶ್ವರಪ್ಪ ಹಾಗೂ ನನ್ನನ್ನ ಪಕ್ಷದಿಂದ ಉಚ್ಛಾಟಿಸಿದ್ರೂ ಬ್ರಿಗೇಡ್ ಮುಂದುವರೆಯುತ್ತೆ: ಕೆ. ವಿರೂಪಾಕ್ಷಪ್ಪ

ರಾಯಚೂರು: ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ಸಮಾವೇಶಕ್ಕೂ ಬ್ರಿಗೇಡ್‍ಗೂ ಸಂಬಂಧವಿಲ್ಲ. ಒಂದು ವೇಳೆ ಈಶ್ವರಪ್ಪ ಹಾಗೂ ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿದರೂ ಬ್ರಿಗೇಡ್ ಮುಂದುವರೆಯುತ್ತದೆ ಎಂದು ಸಂಗೊಳ್ಳಿರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ. ವಿರುಪಾಕ್ಷಪ್ಪ ಹೇಳಿದ್ದಾರೆ.

ಬ್ರಿಗೇಡ್ ಯಾವ ಪಕ್ಷಕ್ಕೂ ಸೇರಿಲ್ಲ. ರಾಜಕೀಯೇತರ ವ್ಯಕ್ತಿಗಳು ಸಹ ಬ್ರಿಗೇಡ್‍ನಲ್ಲಿದ್ದಾರೆ. ರಾಜ್ಯದಲ್ಲಿ ರಾಜಕೀಯ ಸಂಚಲನಕ್ಕೆ ಬ್ರಿಗೇಡ್ ಕಾರಣವಾಗಿದೆ. ಆದ್ರೆ ಬಡವರಿಗೆ, ಹಿಂದುಳಿದವರಿಗೆ ನ್ಯಾಯ ಕೊಡಿಸುವುದು ಬ್ರಿಗೇಡ್ ಉದ್ದೇಶ. ಬ್ರಿಗೇಡ್ ಚಟುವಟಿಕೆಗಳನ್ನ ನಿಲ್ಲಿಸುವಂತೆ ಅಮಿತ್ ಷಾ ಎಲ್ಲೂ ಹೇಳಿಲ್ಲ. ಕೇವಲ ವದಂತಿ ಹಬ್ಬಿಸಲಾಗುತ್ತಿದೆ ಎಂದು ವಿರೂಪಾಕ್ಷಪ್ಪ ಹೇಳಿದ್ರು.

ಬ್ರಿಗೇಡ್ ಬಲಗೊಳಿಸಲು ಮೇ 8ರಂದು ರಾಯಚೂರಿನಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತಗಳಲ್ಲಿ ಯುವ ಬ್ರಿಗೇಡ್ ಸ್ಥಾಪನೆ ಮಾಡುತ್ತೇವೆ. ಜೂನ್ 18ಕ್ಕೆ ಮೈಸೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಅಂದ್ರು .

ಜುಲೈನಲ್ಲಿ ರಾಜ್ಯದ ಎಲ್ಲಾ ಪಿಯು ಕಾಲೇಜಿನ 10,026 ವಿದ್ಯಾರ್ಥಿಗಳಿಗೆ ಪುರಸ್ಕಾರ ಹಮ್ಮಿಕೊಂಡಿದ್ದು, ಕೇಂದ್ರ ಸಚಿವರಾದ ಅಮಿತ್ ಷಾ ಅಥವಾ ರಾಜನಾಥ್ ಸಿಂಗ್‍ರಿಂದ ಪ್ರತಿ ಕಾಲೇಜಿನ ಇಬ್ಬರು ಮೆರಿಟ್ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಗುವುದು ಅಂತ ವಿರೂಪಾಕ್ಷಪ್ಪ ಹೇಳಿದರು.

 

Leave a Reply

Your email address will not be published. Required fields are marked *