Chitradurga
ತಾಯಿಗೆ ವಯಸ್ಸಾಗಿದೆ ಎಂದು ಬಿಡಲು ಒಪ್ಪುತ್ತೀರಾ- ವಿರೋಧ ಪಕ್ಷದವರಿಗೆ ಈಶ್ವರಪ್ಪ ಪ್ರಶ್ನೆ

ಚಿತ್ರದುರ್ಗ: ತಾಯಿಗೆ ವಯಸ್ಸಾಗಿದೆ ಎಂದು ಬಿಡಲು ಒಪ್ಪುತ್ತೀರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಗೋಹತ್ಯೆಗೆ ಅವಕಾಶ ಕೊಡುತ್ತೇವೆ ಎಂದರೆ ಡಿಕೆಶಿ, ಸಿದ್ಧರಾಮಯ್ಯ ಮನೆಯಲ್ಲಿ ಹೆಣ್ಣುಮಕ್ಕಳು ಊಟ ಹಾಕಲ್ಲ. ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಯಾಕೆ ಬೇಡ ಎಂಬುದರ ಕುರಿತು ಚರ್ಚೆ ನಡೆಸಬೇಕಿತ್ತು. ಆದರೆ ಸದನದಲ್ಲಿ ಚರ್ಚೆ ಬಾಯ್ಕಾಟ್ ಮಾಡಿದ್ದಾರೆ. ಅವರೇ ಸಂವಿಧಾನ ವಿರೋಧಿಗಳು. ಸಿದ್ದರಾಮಯ್ಯ ಅಧಿಕಾರಕ್ಕೆ ಬರುವುದು ತಿರುಕನ ಕನಸು, ಹಗಲು ಕನಸು. ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಲ್ಲಿ ಉಳಿತಾರೋ ಇಲ್ವೋ ಗೊತ್ತಿಲ್ಲ. ಜನರ ಅಪೇಕ್ಷೆಯಂತೆ ಸರ್ಕಾರ ನಡೆದಿದೆ. ರಾಜ್ಯದಲ್ಲಿ ವಿಪಕ್ಷವೇ ಇಲ್ಲ. ಮುಸ್ಲಿಂ ಮತಬ್ಯಾಂಕಿಗಾಗಿ ಗೋಹತ್ಯೆ ನಿಷೇಧ ಕಾಯ್ದೆಗೆ ಕೈ ನಾಯಕರು ವಿರೋಧಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಇಂದು ಗೋವಿನ ಮೂಲಕ ಥಾಯಿಯ ರಕ್ಷಣೆ ಮಾಡಿದ್ದೇವೆ. ಮುಂದೆ ಲವ್ ಜಿಹಾದ್ ಕಾನೂನು ಮೂಲಕ ಹೆಣ್ಣಿನ ರಕ್ಷಣೆ ಮಾಡುತ್ತೇವೆ, ನಾವು ಬಿಡುವುದಿಲ್ಲ. ಹೆಣ್ಣು ಮಕ್ಕಳ ಜೊತೆ ಪ್ರೀತಿಯ ನಾಟಕವಾಡಿ ವಂಚಿಸುತ್ತಿದ್ದಾರೆ. ಬೇರೆ ರಾಜ್ಯಗಳಿಗೆ, ದೇಶಗಳಿಗೆ ಕರೆದೊಯ್ದು ಮಾರಾಟ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಕೈ ಮುಖಂಡರು ಯಾವ ಪಕ್ಷಕ್ಕೆ ಬೇಕಾದರು ಹೋಗುತ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷಾಂತರದ ನಾಯಕ. ಕ್ರಾಸ್ ಬೀಡ್ ಅನ್ನುವಂಥದ್ದು ನಾಯಿಗೆ ಬಳಸುವ ಪದ. ಇಂದಿರಾ ಗಾಂಧಿ, ಫೀರೋಜ್ ಖಾನ್, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಬರ್ಟ್ ವಾದ್ರಾ ಇವರನ್ನು ನೋಡಿ ಕ್ರಾಸ್ ಬೀಡ್ ನಲ್ಲೇ ಅಸಂಸ್ಕೃತಿ ಬಂದಿದೆ. ಈಗ ಈಶ್ವರಪ್ಪ ಕುರುಬರಾದರಾ ಎಂದು ಕೇಳುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
