Advertisements

ಪ್ರಜಾಪ್ರಭುತ್ವದಲ್ಲಿದ್ದೇವೆಯೇ ಇಲ್ಲ ಗೂಂಡಾಗಳ ರಾಜ್ಯದಲ್ಲಿದ್ದೀವಾ? ಈಶ್ವರ ಖಂಡ್ರೆ

ಬೀದರ್: ಮತಗಟ್ಟೆ ಒಳಗಡೆ ಬನ್ನಿ ನೋಡೋಣ ಎಂದು ಪ್ರಕಾಶ್ ಖಂಡ್ರೆ ನನಗೆ ಧಮ್ಕಿ ಹಾಕಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೇ ಅಥವಾ ಗೂಂಡಾಗಳ ರಾಜ್ಯದಲ್ಲಿದ್ದೀವಾ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisements

ಒಬ್ಬ ಶಾಸಕನಿಗೆ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವರ ಸಮ್ಮುಖದಲ್ಲಿ ಬಹಿರಂಗವಾಗಿ ಧಮ್ಕಿ ಹಾಕುತ್ತಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲವೇ? ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತುಕೊಂಡಿವೆಯೇ? ಒಬ್ಬ ಶಾಸಕರಿಗೆ ಮತದಾನ ಮಾಡಲು ರಕ್ಷಣೆ ಇಲ್ಲವಾದರೆ, ಗ್ರಾಪಂ ಸದಸ್ಯರ ಕಥೆ ಏನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಧಿವೇಶನಕ್ಕೆ ಹಾಜರಾಗುವವರಿಗೆ ಎರಡು ಡೋಸ್ ಲಸಿಕೆ, ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ದಾಯ: ವೆಂಕಟೇಶ್ ಕುಮಾರ್

Advertisements

ನೀವೆ ಸೀರೆ ಹಾಗೂ ಬೆಳ್ಳಿಯ ಕಾಯಿನ್ ಕೊಟ್ಟು ನಮ್ಮ ಮೇಲೆ ಆರೋಪ ಮಾಡುತ್ತಿದ್ದೀರಿ. ನಮಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ ಎಂದರೆ, ನಾನು ನಾಳೆ ಯಾವ ಅಂಗರಕ್ಷಕರೂ ಇಲ್ಲದೇ ಮತದಾನ ಮಾಡಲು ಹೋಗುತ್ತೇನೆ. ತಾಕತ್ತಿದ್ದರೆ ನನ್ನನ್ನು ತಡೆಯಿರಿ ಎಂದು ಸವಾಲು ಹಾಕಿದ್ದಾರೆ.

ಕೇಂದ್ರ ಸಚಿವ ಖೂಬಾ, ಸಚಿವ ಪ್ರಭು ಚೌಹಾಣ್, ಬಸವಕಲ್ಯಾಣ ಶಾಸಕರು ಸೇರಿದಂತೆ ಬಿಜೆಪಿ ನಾಯಕರು ಗೂಂಡಾವರ್ತನೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ: ಸಿಎಂ

Advertisements

Advertisements
Exit mobile version