Cinema
ಮಗನಿಗೆ ಮಡಿಕೆ ಮಾಡುವುದನ್ನು ಹೇಳಿಕೊಟ್ಟ ಕರೀನಾ

ಮುಂಬೈ: ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿರುವ ಕರೀನಾ ಕಪೂರ್ ಇಂದು ಸುದ್ದಿಯಾಗಿರುವುದು ಅವರ ಮಗನ ವಿಚಾರಕ್ಕೆ. ಅವರ ಮಗನಿಗೆ ಮಡಿಕೆ ಮಾಡುವುದನ್ನು ಕಲಿಸಿಕೊಡುವ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಕಪೂರ್ ದಂಪತಿಗೆ ತಮ್ಮ ಮಗ ತೈಮೂರ್ ಅಲಿ ಖಾನ್ ಎಂದರೆ ಬಲು ಪ್ರೀತಿ. ಸೈಫ್ ಅಲಿಖಾನ್ ತಮ್ಮ ಮಗ ಹಾಗೂ ತುಂಬು ಗರ್ಭಿಣಿ ಕರೀನಾಳನ್ನು ಕರೆದುಕೊಂಡು ಪ್ರವಾಸಕ್ಕೆ ಹೋಗಿದ್ದಾರೆ. ಹಿಮಾಚಲ ಪ್ರದೇಶವನ್ನು ಸುತ್ತಾಡುತ್ತಿರುವ ಇವರು ತಮ್ಮ ಮಗನಿಗೆ ಮಡಿಕೆ ಮಾಡುವುದನ್ನು ಕಲಿಸಿಕೊಡುತ್ತಿದ್ದಾರೆ.
View this post on Instagram
ಕರೀನಾ ಕೈ ಕೆಸರು ಮಾಡಿಕೊಂಡು ಮಗನಿಗೆ ಮಡಿಕೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಅಮ್ಮ ಹೇಳಿದಂತೆ ತೈಮೂರ್ ಕೂಡಾ ಮಣ್ಣನ್ನು ಹಿಡಿದು ಮಡಿಕೆ ಮಾಡುತ್ತಿದ್ದಾನೆ. ಕರೀನಾ ತೈಮೂರ್ ಕೈಯಲ್ಲಿ ಮಣ್ಣನ್ನು ಹಿಡಿದುಕೊಂಡು ಮಡಿಕೆ ಚಕ್ರದಲ್ಲಿ ಇಟ್ಟು ತಿರುಗಿಸುತ್ತಾ ಮಡಿಕೆ ಮಾಡುವುದನ್ನು ಹೇಳಿ ಕೊಟ್ಟಿದ್ದಾರೆ. ಕೊನೆಗೆ ಪುಟ್ಟದಾದ ಒಂದು ಮಡಿಕೆಯನ್ನು ಮಾಡಿದ್ದಾರೆ.
ಸೆಲೆಬ್ರಿಟಿಗಳ ಮಕ್ಕಳು ಅಭಿಮಾನಿಗಳಿಗೆ ಸ್ಟಾರ್ಗಳು ಇದ್ದಂತೆ. ಸೈಫ್ ಅಲಿ ಖಾನ್ ಮಗ ತೈಮೂರ್ ಮಡಿಕೆ ಮಾಡುವುದನ್ನು ಅಮ್ಮನಿಂದ ಕಲಿಯುತ್ತಿರುವುದನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ಕರೀನಾ ಕಪೂರ್ ತಮ್ಮ ಎರಡನೇ ಮಗುವಿನ ಬಗ್ಗೆ ವಿಷಯ ಹಂಚಿಕೊಂಡ ನಂತರ, ಬೇಬೊ ಪಾಪರಾಜಿಗಳ ಹಾಟ್ ಫೇವರಿಟ್ ಆಗಿದ್ದಾರೆ. ಕರೀನಾ ಮನೆಯಿಂದ ಹೊರ ಬಂದರೆ ಸಾಕು ಫೋಟೋ ಗ್ರಾಫರಗಳು ಹಿಂದೆ ಬೀಳುತ್ತಾರೆ. ಇದರಿಂದಾಗಿ ಕರೀನಾಳ ನಿತ್ಯದ ಅಪ್ಡೇಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.
ಕರೀನಾ ಕಪೂರ್ ಗರ್ಭಿಣಿಯಾಗಿದ್ದರೂ ಕರೀನಾ ಶೂಟಿಂಗ್ ಹಾಗೂ ಪ್ರವಾಸ ಅಂತ ಸಖತ್ ಬ್ಯುಸಿಯಾಗಿ ಆಗಿದ್ದಾರೆ. ಸಾಕಷ್ಟು ಸಿನಿಮಾ ಮತ್ತು ಜಾಹಿರಾತುಗಳು ಹಾಗೂ ಸಾಲು ಸಾಲುಫೋಟೋಶೂಟ್ಗಳಲ್ಲಿಯೂ ಅಷ್ಟೇ ಬ್ಯುಸಿಯಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಇರುವ ಕರೀನಾ ಕಪೂರ್ ಹಿಮಾಚಲ ಪ್ರದೇಶ ಪ್ರವಾಸದ ವಿಡಿಯೋ ಹಾಗೂ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕರೀನಾ ಹಾಗೂ ತೈಮೂರ್ ಅವರ ವಿಡಿಯೋಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
