Wednesday, 18th September 2019

Recent News

ವಿದ್ಯಾರ್ಥಿನಿ ಅತ್ಯಾಚಾರ ಕೇಸ್ – ಬೆಂಗ್ಳೂರಿನಿಂದ ಬಂತು ಮತ್ತೊಂದು ಎಫ್‍ಎಸ್‍ಎಲ್ ತಂಡ

ರಾಯಚೂರು: ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಇಂದು ರಾಯಚೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸಿಐಡಿ ಎಸ್.ಪಿ ಶರಣಪ್ಪ, ಮೃತಳ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತೇವೆ. ಪ್ರಕರಣದ ಬಗ್ಗೆ ಯಾರಿಗಾದರೂ ಮಾಹಿತಿಯಿದ್ದರೆ ತಿಳಿಸಬಹುದು ಅಂತ ಹೇಳಿದ್ದರು. ಇದನ್ನೂ ಓದಿ: ಡೆತ್ ನೋಟ್ ನಂಬಿದ್ದ ಪೊಲೀಸರಿಗೆ ಶಾಕ್: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್!

ಈಗ ಬೆಂಗಳೂರಿನಿಂದ ಮತ್ತೊಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‍ಎಸ್‍ಎಲ್) ತಂಡ ಬಂದಿದ್ದು ಘಟನೆ ಬಗ್ಗೆ ಸ್ವತಂತ್ರ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಆಯಾಮಗಳಿಂದಲೂ ಕೂಲಂಕುಶವಾಗಿ ತನಿಖೆ ನಡೆಸುತ್ತೇವೆ. ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವುದು ತನಿಖೆಯಲ್ಲಿ ತಿಳಿದು ಬರುತ್ತದೆ ಎಂದು ಶರಣಪ್ಪ ಹೇಳಿದ್ದಾರೆ. ಇದನ್ನೂ ಓದಿ: ಮಧು ಪತ್ತಾರ್ ಪ್ರಕರಣ ಸಿಐಡಿಗೆ – ರಾಜ್ಯಾದ್ಯಂತ ಹೋರಾಟಕ್ಕೆ ತೀವ್ರಗೊಂಡ ತನಿಖೆ

ಮೃತಳ ಶವ ಪತ್ತೆಯಾದ ಸ್ಥಳ ಪರಿಶೀಲನೆ ನಡೆಸಿದ ಶರಣಪ್ಪ ನಮ್ಮ ತಂಡ ರಾಯಚೂರಿನಲ್ಲೇ ಬೀಡು ಬಿಡಲಿದೆ ಅಂತ ಹೇಳಿದ್ದಾರೆ. ಸಿಐಡಿ ಡಿವೈಎಸ್‍ಪಿ ರವಿಶಂಕರ್, ಸಿಪಿಐ ದಿಲೀಪ್ ಕುಮಾರ್ ಸೇರಿದಂತೆ ನಾಲ್ಕು ಜನ ಅಧಿಕಾರಿಗಳ ತಂಡ ಭಾನುವಾರದಿಂದ ನಗರದಲ್ಲಿ ತನಿಖೆ ಆರಂಭಿಸಿದೆ. ಇಂದು ನಗರಕ್ಕೆ ಭೇಟಿ ನೀಡಿರುವ ಸಿಐಡಿ ಶರಣಪ್ಪ ರಾಯಚೂರು ಡಿವೈಎಸ್ಪಿ ಶೀಲವಂತರಿಂದ ಮಾಹಿತಿ ಪಡೆದು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *