Thursday, 5th December 2019

Recent News

ಬಿಜೆಪಿಯ 16 ದಿನಗಳ ರೆಸಾರ್ಟ್ ವಾಸ್ತವ್ಯ ಅಂತ್ಯ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಎಚ್.ಡಿ ಕುಮಾರಸ್ವಾಮಿ ಅವರು ರಾಜೀನಾಮೆ ಕೊಡುತ್ತಿದ್ದಂತೆಯೇ ರಾತ್ರೋ ರಾತ್ರಿ ರಮಡಾ ರೆಸಾರ್ಟಿನಿಂದ ಬಿಜೆಪಿ ಶಾಸಕರು ತೆರಳಿದ್ದಾರೆ.

ಈ ಮೂಲಕ 16 ದಿನಗಳಿಂದ ಶಾಸಕರಿಂದ ತುಂಬಿ ತುಳುಕುತ್ತಿದ್ದ ರಮಡಾ ರೆಸಾರ್ಟ್ ಇದೀಗ ಖಾಲಿಯಾಗಿದೆ. ಶಾಸಕರು ವಿಧಾನಸೌಧದಿಂದ ಮಂಗಳವಾರ ರಾತ್ರಿ ನೇರವಾಗಿ ರಮಡಾ ರೆಸಾರ್ಟಿಗೆ ಆಗಮಿಸಿದ್ದರು. ಬಳಿಕ ಬೆಂಗಳೂರಿನ ಸುತ್ತಮುತ್ತಲಿನ ಶಾಸಕರು ಮನೆಗೆ ತೆರಳಿದ್ದಾರೆ. ಉಳಿದ ಕೆಲ ಶಾಸಕರು ಶಾಸಕರ ಭವನದ ತಮ್ಮ ಕೊಠಡಿಗಳಿಗೆ ಹಾಗೂ ಹೋಟೆಲ್ ಗಳಿಗೆ ತೆರಳಿದ್ದಾರೆ.

ಉತ್ತರ ಕರ್ನಾಟಕ ಮೂಲದ ಕೆಲ ಶಾಸಕರು ಬೆಂಗಳೂರು ಶಾಸಕರ ನಿವಾಸಗಳಿಗೆ ತೆರಳಿದ್ದಾರೆ. ರಮಡಾ ರೆಸಾರ್ಟ್ ಹಾಗೂ ಸಾಯಿಲೀಲಾ ಹೋಟೆಲಿನಲ್ಲಿ ವಾಸ್ತವ್ಯವಿದ್ದ ಎಲ್ಲಾ ಶಾಸಕರು ನಿನ್ನೆ ತಡರಾತ್ರಿಯೇ ರೂಂ ಖಾಲಿ ಮಾಡಿದ್ದಾರೆ.

ಸದ್ಯ ರಮಡಾ ರೆಸಾರ್ಟ್ ಹಾಗೂ ಸಾಯಿಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಯಾವ ಬಿಜೆಪಿ ಶಾಸಕರು ಇಲ್ಲ. ತಡರಾತ್ರಿ ಆದ್ದರಿಂದ ಶಾಸಕರುಗಳು ತಂಗಿದ್ದ ರೂಂಗಳಲ್ಲಿ ಅವರ ಬೆಂಬಲಿಗರಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Leave a Reply

Your email address will not be published. Required fields are marked *