Advertisements

ಕಚೇರಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ನೌಕರ

ಮಂಡ್ಯ: ತಾಲೂಕು ಕಚೇರಿ ಕಟ್ಟಡದ ಮೇಲಿಂದ ಬಿದ್ದು ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಜರುಗಿದೆ.

Advertisements

ವೆಂಕಟೇಶ್ ಮೃತನಾಗಿದ್ದಾನೆ. ಈತ ಮಂಡ್ಯ ತಾಲೂಕು ಕಚೇರಿಯ ನೌಕರನಾಗಿದ್ದನು. ಕಾರ್ಯ ನಿಮಿತ್ತ ಮದ್ದೂರು ತಾಲೂಕು ಕಚೇರಿಗೆ ವೆಂಕಟೇಶ್ ಬಂದಿದ್ದನು. ಈ ವೇಳೆ ಏಕಾಏಕಿ ಕಚೇರಿಯ ಕಟ್ಟಡದ ಮೇಲೆ ತೆರಳಿ ಹಾರಿದ್ದಾನೆ.  ಇದನ್ನೂ ಓದಿ: ಪಾಸಿಟಿವ್ ಇದ್ದರೂ ಶಬರಿಮಲೆಗೆ ತೆರಳ್ತಿದ್ದ 30 ಮಂದಿ ಮೇಲೆ ಎಫ್‍ಐಆರ್

Advertisements

ತಕ್ಷಣವೇ ಸ್ಥಳದಲ್ಲಿ ಇದ್ದ ನೌಕರರು ವೆಂಕಟೇಶ್‍ನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸದ್ಯ ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ

Advertisements
Advertisements
Exit mobile version