ಮಕ್ಕಳ ದಿನಾಚರಣೆಗೆ ಶುಭ ಕೋರಿದ ಗಣ್ಯರು

Advertisements

ಬೆಂಗಳೂರು: ಸ್ವತಂತ್ರ ಭಾರತದ ಮೊದಲ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ನಿಮಿತ್ತ ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಗಣ್ಯರು ಸೋಶಿಯಲ್ ಮೀಡಿಯಾ ಮೂಲಕವಾಗಿ ಶುಭ ಕೋರುತ್ತಿದ್ದಾರೆ.

Advertisements

ಇಂದು ನವೆಂಬರ್ 14 ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದೇ ಕರೆಯುತ್ತಿದ್ದರು. ಅವರಿಗೂ ಮಕ್ಕಳೆಂದರೆ ತುಂಬ ಅಚ್ಚುಮೆಚ್ಚಾಗಿತ್ತು. ಇದೇ ಕಾರಣಕ್ಕೆ ಅವರ ಜನ್ಮದಿನವನ್ನು ಭಾರತದಲ್ಲಿ ಬಾಲ ದಿವಸ್ ಅಥವಾ ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಜವಾಹರ್ ಲಾಲ್ ನೆಹರು ಅವರ 132ನೇ ಜನ್ಮಜಯಂತಿ ಆಚರಿಸಲಾಗುತ್ತಿದ್ದು ಮಕ್ಕಳ ದಿನಾಚರಣೆಯ ಅಂಗವಾಗಿ ಗಣ್ಯರು ಶುಭಕೋರಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 11 ವರ್ಷದ ಬಳಿಕ ಮೈದುಂಬಿದ ಸುವರ್ಣಾವತಿ ಜಲಾಶಯ- ನದಿ ಪಾತ್ರದ ಜನರಿಗೆ ಎಚ್ಚರಿಕೆ

Advertisements

ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಕಾಮನೆಗಳು ಎಂದು ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡುವ ಮೂಲಕವಾಗಿ ಮಕ್ಕಳ ದಿನಾಚರಣೆಯ ಶುಭ ಕೋರಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದೇ ಸಾಲಿನಲ್ಲಿ ಪಂಡಿತ್ ಜವಾಹರ್​ ಲಾಲ್​ ನೆಹರೂ ಜನ್ಮದಿನದಂದು ಅವರಿಗೆ ನಮನಗಳು ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಹೆಣ್ಣು ಮಗು ಮಾರಾಟ ಮಾಡಿದ್ರಾ ಭಿಕ್ಷುಕ ದಂಪತಿ?

Advertisements

ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕ, ಪ್ರಥಮ ಪ್ರಧಾನಮಂತ್ರಿ, ಭಾರತರತ್ನ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜಯಂತಿಯಂದು, ಅವರ ಸಂಸ್ಮರಣೆಗಳ ಜೊತೆಗೆ ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸದೃಢ, ಸಶಕ್ತ, ಸಮೃದ್ಧ ಭಾರತಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ನಮ್ಮೆಲ್ಲರ ಹೊಣೆಗಾರಿಕೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೇಳಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಾಡಿನ ಎಲ್ಲ ನಲ್ಮೆಯ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ಭವ್ಯಭಾರತದ ನಿರ್ಮಾಣಕಾರರಾದ ಮಕ್ಕಳ ಬೌದ್ಧಿಕ, ಶೈಕ್ಷಣಿಕ ಪ್ರಗತಿಗೆ ನೆರವಾಗುವ ಮೂಲಕ ಮಕ್ಕಳ ಬಾಳು ಬೆಳಗೋಣ. ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಜಯಂತಿಯ ನಮನಗಳನ್ನು ತಿಳಿಸಿದ್ದಾರೆ.

ಸಚಿವ ಎಸ್ ಟಿ ಸೋಮಶೇಖರ್ ಅವರು ನಾವು ನೋಡದ ಭವಿಷ್ಯದ ಸಮಯಕ್ಕೆ ನಾವು ಕಳುಹಿಸುವ ಜೀವಂತ ಸಂದೇಶಗಳೆಂದರೆ ಮಕ್ಕಳು. ಮಕ್ಕಳ ದಿನಾಚರಣೆಯ ಶುಭಾಶಯಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಶುಭಾಷಯ ತಿಳಿಸಿದ್ದಾರೆ.

Advertisements
Exit mobile version