Connect with us

ಆನೆಯನ್ನೇ ಅಟ್ಟಿಸಿಕೊಂಡು ಓಡಿದ ಜನರ ಹಿಂಡು- ವೀಡಿಯೋ ವೈರಲ್, ಅರಣ್ಯಾಧಿಕಾರಿ ಗರಂ

ಆನೆಯನ್ನೇ ಅಟ್ಟಿಸಿಕೊಂಡು ಓಡಿದ ಜನರ ಹಿಂಡು- ವೀಡಿಯೋ ವೈರಲ್, ಅರಣ್ಯಾಧಿಕಾರಿ ಗರಂ

ಕೆಲದಿನಗಳ ಹಿಂದೆ ಆನೆಯೊಂದನ್ನು ಊರಿನ ಜನರೆಲ್ಲ ಸೇರಿ ಅಟ್ಟಿಸಿಕೊಂಡು ಹೋಗುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಅರಣ್ಯ ಅಧಿಕಾರಿಯೊಬ್ಬರು ಅಟ್ಟಿಸಿಕೊಂಡು ಹೋಗಿರುವ ಜನರ ವಿರುದ್ಧ ಕಿಡಿಕಾರಿದ್ದಾರೆ.

ಆನೆಯನ್ನು ಜನರ ಗುಂಪು ಓಡಿಸಿಕೊಂಡು ಹೋಗುತ್ತಿರುವ ವೀಡಿಯೋವನ್ನು ನೋಡಿ ಮರು ಟ್ವೀಟ್ ಮಾಡಿರುವ ಅರಣ್ಯಾಧಿಕಾರಿ ಸುಧಾ ರಾಮನ್ ಅವರು, ಯಾವುದೇ ಪದಗಳಿಲ್ಲ, ಈ ವೀಡಿಯೋದಲ್ಲಿ ಯಾರು ಪ್ರಾಣಿಯಂತೆ ಕಾಣುತ್ತಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಈ ವೀಡಿಯೋವನ್ನು ಗಮನಿಸಿದಾಗ ಆನೆಯೊಂದು ರಾತ್ರಿ ಹೊತ್ತಿನಲ್ಲಿ ರಸ್ತೆಯಲ್ಲಿ ಓಡುತ್ತಿದ್ದು, ಆನೆಯ ಹಿಂದೆ ಬಹುದೊಡ್ಡ ಸಂಖ್ಯೆಯ ಜನರ ಗುಂಪು ಆನೆಯನ್ನೆ ಅಟ್ಟಾಡಿಸಿಕೊಂಡು ಬರುತ್ತಿದ್ದು, ಈ ದೃಶ್ಯವನ್ನು ಸೆರೆ ಹಿಡಿದಿರುವ ಸ್ಥಳೀಯ ಜೋರಾಗಿ ನಗುತ್ತಿರುವುದು ಕೇಳಿ ಬರುತ್ತಿದೆ.

ಅರಣ್ಯಧಿಕಾರಿ ಸುಧಾ ರಾಮನ್ ಈ ವೀಡಿಯೋವನ್ನು ನೋಡಿ ಟ್ವಿಟ್ಟರ್‍ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಮನುಷ್ಯರು ಪ್ರಾಣಿಗಳಂತೆ ವರ್ತಿಸಬಾರದು. ಈ ದೃಶ್ಯದಲ್ಲಿ ಯಾರು ಪ್ರಾಣಿಗಳ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬುದು ತಿಳಿದು ಬರುತ್ತಿದೆ. ಈ ಕುರಿತು ದೇಶದಾದ್ಯಂತ ಈಗಾಗಲೇ ಅರಣ್ಯ ಇಲಾಖೆ ಜಾಗೃತಿ ಮೂಡಿಸುತ್ತಿದ್ದು, ಮನುಷ್ಯನಂತೆ ಪ್ರಾಣಿಗಳಿಗೂ ಅದರದೇ ಆದ ಒತ್ತಡದ ಜೀವನ ಇರುತ್ತದೆ. ನಾವು ಬುದ್ಧಿವಂತರಾದ ಮನುಷ್ಯರು ಇದನ್ನು ಅರ್ಥಮಾಡಿಕೊಂಡು ಇತರರಿಗೂ ಅರ್ಥ ಮಾಡಿಸಬೇಕೆಂದು ಬರೆದುಕೊಂಡಿದ್ದಾರೆ.

Advertisement
Advertisement