Connect with us

Crime

ದಂಪತಿಯನ್ನು ಕಾಪಾಡಲು ಬಂದು ಪ್ರಾಣ ಬಿಟ್ಟ ನೆರೆಮನೆಯವ

Published

on

Share this

ತಿರುವನಂತಪುರಂ: ವಿದ್ಯುತ್ ಅವಘಡದಿಂದ ದಂಪತಿಯನ್ನು ಪಾರು ಮಾಡಲು ಬಂದ ಪಕ್ಕದ ಮನೆಯಾತನನ್ನು ಸೇರಿಸಿ ಮೂವರೂ ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಪ್ರಕ್ಕುಲಂನಲ್ಲಿ ನಡೆದಿದೆ.

ಸಂತೋಷ್ (45), ಪತ್ನಿ ರಾಮ್‍ಲತಾ (42) ಮತ್ತು ಇವರ ನೆರಮನೆಯ ಶ್ಯಾಮ್ ಕುಮಾರ್(35) ಮೃತರಗಿದ್ದಾರೆ. ನಿನ್ನೆ ರಾತ್ರಿ ಈ ದಂಪತಿಯ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ ಈ ಧ್ವನಿಯನ್ನು ಕೇಳಿ ಕಾಪಾಡಲು ಬಂದ ನೆರೆ ಮನೆಯವನನ್ನು ಸೇರಿಸಿ ಮೂವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಾವಿಬ್ಬರೂ ಬ್ಯಾಡ್ಮಿಂಟನ್ ಆಡ್ತಾ ಇದ್ವಿ, ತುಂಬಾ ದುಃಖವಾಗ್ತಿದೆ- ಪ್ರಜ್ವಲ್ ಸಂತಾಪ

ಬಾತ್‍ರೂಂನಿಂದ ಹೊರಬರಬೇಕಿದ್ದರೆ ರಾಮಲತಾ ಆಯತಪ್ಪಿ ಕೆಳಗೆ ಬಿದ್ದಿದ್ದರು. ನಂತರ ಎದ್ದುನಿಲ್ಲಲು ಪ್ರಯತ್ನಿಸಿದ ಅವರು, ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಹಿಡಿದಿದ್ದಾರೆ. ಕೂಡಲೇ ಪತ್ನಿಯನ್ನು ಕಾಪಾಡಲು ಹೋದ ಸಂತೋಷ್‍ಗೆ ಕೂಡ ವಿದ್ಯುತ್ ತಗುಲಿದೆ. ಈ ದಂಪತಿಯ ಚೀರಾಟ ಕೇಳಿ ಓಡಿ ಬಂದ ಶ್ಯಾಮ್‍ಕುಮಾರ್ ದಂಪತಿಯನ್ನು ಕಾಪಾಡಲು ಮುಂದಾದರು. ಆದರೆ ದುರದೃಷ್ಟಕ್ಕೆ ಅವರೂ ಸಹ ಶಾಕ್‍ಗೆ ಒಳಗಾಗಿದ್ದಾರೆ. ಈ ವೇಳೆ ಮೂವರೂ ಮೃತಪಟ್ಟಿದ್ದಾರೆ.

ಈ ದಂಪತಿಗೆ ಪುಟ್ಟ ಮಕ್ಕಳಿದ್ದು, ನೆರೆಮನೆಯ ಶ್ಯಾಮ್​ಕುಮಾರ್​ಗೆ ಪತ್ನಿ, ಮಕ್ಕಳಿದ್ದಾರೆ. ಈ ಮೂವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂಚಲುಮಮ್ಮೂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement