Connect with us

Crime

ಒಂದಲ್ಲ, ಎರಡಲ್ಲ, ಎಂಟು ಮದುವೆಯಾದ ಸುಂದರಿ ಅರೆಸ್ಟ್

Published

on

-ಬಂಧನದ ಬಳಿಕ ಬಿಚ್ಚಿಟ್ಟಿದ್ದು ಮದ್ವೆ ಕಥೆ

ಭೋಪಾಲ್: 8 ಮದುವೆಯಾಗಿದ್ದ ಕಿಲಾಡಿ ಮಹಿಳೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಮೀನಾಕ್ಷಿ ಬಂಧಿತ ಮಹಿಳೆ. ಇದುವರೆಗೂ ಮೀನಾಕ್ಷಿ ಎಂಟು ಮದುವೆ ಮಾಡಿಕೊಂಡು ಮೋಸ ಮಾಡಿದ್ದಾಳೆ. ಇತ್ತೀಚೆಗೆ ಮೀನಾಕ್ಷಿ ಮದುವೆಯಾಗಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿದ್ದನು. ಈ ಪ್ರಕರಣ ಬೆನ್ನತ್ತಿದ್ದಾಗ ಮೀನಾಕ್ಷಿಯ ಮೋಸದ ಮದುವೆಯಾಟ ಬೆಳಕಿಗೆ ಬಂದಿದೆ.

ಜುಲೈ 26ರಂದು ಮಹೇಂದ್ರ ಕಲಾಲ್ ಎಂಬ ಯುವಕನನ್ನು ಮೀನಾಕ್ಷಿ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆಯಾಗಿದ್ದಳು. ಜುಲೈ 29ರಂದು ಮಹೇಂದ್ರನ ಮೃತದೇಹ ರಸ್ತೆ ಬದಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಮಹೇಂದ್ರ ಮೂರು ದಿನಗಳ ಹಿಂದೆ ಮದುವೆಯಾಗಿರುವ ವಿಷಯ ತಿಳಿದಿತ್ತು

ಜುಲೈ 26ರಂದು ಕಾನೂನುಬದ್ಧವಾಗಿ ಮದುವೆಯಾಗಿದ್ದ ಮಹೇಂದ್ರ ಅಂದು ಮೀನಾಕ್ಷಿ ಸೋದರ ಎಂದು ಹೇಳಿಕೊಂಡಿದ್ದ ಗಜೇಂದ್ರ ಅಲಿಯಾಸ್ ಪುಷ್ಪೇಂದ್ರ ದುಬೆಗೆ 2 ಲಕ್ಷ ರೂ. ಮತ್ತು ಮ್ಯಾರೇಜ್ ಬ್ಯೂರೋಗೆ 50 ಸಾವಿರ ರೂ. ಚೆಕ್ ನೀಡಿದ್ದನು.

ಮಹೇಂದ್ರನ ಮನೆಗೆ ಜುಲೈ 28ರಂದು ಗಜೇಂದ್ರ ಬಂದಿದ್ದಾನೆ. ಕೆಲಸದ ನಿಮಿತ್ ಮೀನಾಕ್ಷಿಯನ್ನು ಊರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಈ ವೇಳೆ ಮಹೇಂದ್ರ ತಾನು ಪತ್ನಿ ಜೊತೆ ಬರುವದಾಗಿ ಹೇಳಿ ಕಾರ್ ಏರಿದ್ದಾನೆ. ಮಾರ್ಗ ಮಧ್ಯೆ ಅನುಮಾನಗೊಂಡ ಮಹೇಂದ್ರ ಎಲ್ಲರ ಬಗ್ಗೆ ವಿಚಾರಿಸತೊಡಗಿದ್ದಾನೆ. ಕಾರ್ ನಿಲ್ಲಿಸುವಂತೆ ಸ್ಟೇರಿಂಗ್ ಹಿಡಿದಾಗ ಮಹೇಂದ್ರನನ್ನು ಟೋಲ್ ಬಳಿ ಇಳಿಸಿ ಮೀನಾಕ್ಷಿ ಮತ್ತು ಗಜೇಂದ್ರ ಎಸ್ಕೇಪ್ ಆಗಿದ್ದಾರೆ.

8 ಮದ್ವೆ ಆಗಿದ್ಳು: ಬಂಧನದ ಬಳಿಕ ಮೀನಾಕ್ಷಿ ತನ್ನ ಎಂಟು ಮೋಸದ ಮದುವೆ ವಿಷಯವನ್ನು ಬಾಯಿ ಬಿಟ್ಟಿದ್ದಾಳೆ. 9 ವರ್ಷಗಳ ಹಿಂದೆ ಧಾರ್ ನಗರದ ನಿವಾಸಿ ಜೊತೆ ಮೀನಾಕ್ಷಿಯ ಮದುವೆಯನ್ನು ಕುಟುಂಬಸ್ಥರು ಮಾಡಿದ್ದರು. ಆದ್ರೆ ಮೂರು ವರ್ಷಗಳ ಹಿಂದೆ ಗಂಡನಿಂದ ದೂರವಾದ ಮೀನಾಕ್ಷಿ ಪುತ್ರಿ ಜೊತೆ ತವರು ಮನೆ ಸೇರಿದ್ದಳು. ಮನೆಯಲ್ಲಿ ಹೊಂದಾಣಿಕೆಯಾಗದ ಹಿನ್ನೆಲೆ ತವರು ತೊರೆದ ಮೀನಾಕ್ಷಿ ಎಂಟು ವರ್ಷದ ಜೊತೆ ಮಗಳ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಳು.

ಪುಷ್ಪೇಂದ್ರನ ಪರಿಚಯ: ಕುಟುಂಬಸ್ಥರಿಂದ ದೂರವಾದ ಬಳಿಕ ಮೀನಾಕ್ಷಿಗೆ ಉತ್ತರ ಪ್ರದೇಶ ಮೂಲದ ಪುಷ್ಪೇಂದ್ರನ ಪರಿಚಯವಾಗಿದೆ. ಇಬ್ಬರು ಜೊತೆಯಾಗಿ ಇಂದೋರ್ ನಲ್ಲಿದ್ಗದ ಸಾರಿಕಾ ಅಲಿಯಾಸ್ ಸಂಗೀತಾಳನ್ನು ಸೇರಿಕೊಂಡಿದ್ದಾರೆ. ಮೂವರು ಪ್ಲಾನ್ ಮಾಡಿ ಹೆಸರು ಬದಲಿಸಿ ನಕಲಿ ಮದುವೆ ಮಾಡಿ ಹಣ ದೋಚುತ್ತಿದ್ದರು. ಮೀನಾಕ್ಷ ರಾಜಸ್ಥಾನದಲ್ಲಿ 3 ಮತ್ತು ಗುಜರಾತಿನಲ್ಲಿ 5 ಮದುವೆಯಾಗಿದ್ದಾಳೆ. ಆದ್ರೆ ಎಲ್ಲಿಯೂ ಮೀನಾಕ್ಷಿ ದೂರು ದಾಖಲಾಗದ ಹಿನ್ನೆಲೆ ಪಾರಾಗಿದ್ದಳು.

Click to comment

Leave a Reply

Your email address will not be published. Required fields are marked *