Friday, 22nd November 2019

Recent News

ಈದ್ ಮಿಲಾದ್ ದಿನ ನಿಮ್ಮ ಮನೆಯಲ್ಲಿರಲಿ ಸ್ಪೆಷಲ್ ಕ್ರೀಂ ಖೀರ್

ಭಾನುವಾರ ಈದ್ ಮಿಲಾದ್ ಹಬ್ಬ. ಹಾಗಾಗಿ ಸಿಹಿ ತಿನಿಸು ತಯಾರಿಸಲು ಸಿದ್ಧತೆ ನಡೆಸಿಕೊಂಡಿರುತ್ತಾರೆ. ಹಬ್ಬದ ದಿನ ವಿಶೇಷವಾದ ಸಿಹಿ ಅಡುಗೆ ಇರಬೇಕು ಎಂಬುದು ಎಲ್ಲರ ಇಷ್ಟ. ಹಾಗಾಗಿ ಸ್ಪೆಷಲ್ ಮತ್ತು ಸರಳವಾಗಿ ಮಾಡುವ ಈದ್ ಖೀರ್ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
* ಹಾಲು- 1.5 ಲೀಟರ್
* ಸಕ್ಕರೆ – 2 ಬಟ್ಟಲು
* ಶಾವಿಗೆ – 1 ಬಟ್ಟಲು
* ದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಜೂರ, ಬದಾಮಿ – 1 ಬಟ್ಟಲು
* ಫ್ರೆಶ್ ಕ್ರೀಂ
* ಪ್ಲೇನ್ ಕೋವಾ – 2 ಸ್ಪೂನ್
* ತುಪ್ಪ – 5-6 ಸ್ಪೂನ್
* ಏಲಕ್ಕಿ ಪುಡಿ – ಅರ್ಧ ಸ್ಪೂನ್
* ಕೇಸರಿ – ಚಿಟಿಕೆ

ಮಾಡುವ ವಿಧಾನ
* ಮೊದಲಿಗೆ ಒಂದು ದೊಡ್ಡದಾದ ಪ್ಯಾನ್‍ಗೆ ಹಾಲು ಹಾಕಿ ಚೆನ್ನಾಗಿ ಕುದಿಸಿ. 15 ರಿಂದ 20 ನಿಮಿಷ ಹಾಲು ಕುದಿದ ನಂತರ ಹಾಲು ಗಟ್ಟಿ ಆಗುತ್ತಾ ಬರುತ್ತದೆ. ಆಗ ಹಾಲಿಗೆ ಕೇಸರಿ ದಳಗಳನ್ನು ಸೇರಿಸಿ.
* ಹಾಲು ಕುದಿಯುವಷ್ಟರಲ್ಲಿ ಒಂದು ಪ್ಯಾನ್‍ಗೆ ತುಪ್ಪ ಹಾಕಿ, ಸಣ್ಣಗೆ ಹೆಚ್ಚಿದ ಡ್ರೈ ಫ್ರೂಟ್ಸ್, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಜೂರ, ಬದಾಮಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. (ಒಂದೊಂದೇ ಹಾಕಿ ಫ್ರೈ ಮಾಡಬಹುದು ಅಥವಾ ಒಟ್ಟಿಗೆ ಹಾಕಿನೂ ಫ್ರೈ ಮಾಡಬಹುದು)
* ಅದೇ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಮೇಲೆ ಶಾವಿಗೆ ಹಾಕಿ ಗೋಲ್ಡನ್ ಬ್ರೌನ್ ಬರೋತನಕ ಫ್ರೈ ಮಾಡಿ.
* ಈಗ ಕುದಿಯುತ್ತಿರುವ ಹಾಲಿಗೆ ಸಕ್ಕರೆ ಸೇರಿಸಿ ಕೈಯಾಡಿಸಿ. 2 ನಿಮಿಷ ಆದ್ಮೇಲೆ ಕೋವಾ ಸೇರಿಸಿ ಕುದಿಸಿ.
* ಬಳಿಕ ಶಾವಿಗೆ ಸೇರಿಸಿ ಕುದಿಸಿ.
* ಈಗ ಏಲಕ್ಕಿ ಪುಡಿ, ಫ್ರೈ ಮಾಡಿದ ಡ್ರೈಫ್ರೂಟ್ಸ್ ಸೇರಿಸಿ.
* ಕೆಳಗೆ ಇಳಿಸುವಾಗ ಫ್ರೆಶ್ ಕ್ರೀಂ ಸೇರಿಸಿ. ಸ್ಟೌ ಆರಿಸಿ ಲಿಡ್ ಮುಚ್ಚಿಡಿ.
* ಈ ಕೀರ್ ತುಂಬಾ ಗಟ್ಟಿಗೂ ಇರಬಾರದು, ತುಂಬಾ ತೆಳ್ಳಗೂ ಇರಬಾರದು. ಸರ್ವ್ ಮಾಡುವಾಗ ಮೇಲೆ ಡ್ರೈ ಫ್ರೂಟ್ಸ್ ಚೂರುಗಳನ್ನು ಉದುರಿಸಿ ಕೊಡಿ.

ಇದನ್ನೂ ಓದಿ: ಈದ್ ಮಿಲಾದ್ ಆಚರಣೆಯ ವಿಶೇಷತೆ ಇಲ್ಲಿದೆ

Leave a Reply

Your email address will not be published. Required fields are marked *