ಬೆಂಗಳೂರು: ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಇಡಿ ಸಮನ್ಸ್ ನೀಡಿರುವುದು ಬಿಜೆಪಿ ಸರ್ಕಾರದ ಸೇಡಿನ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ? ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ನಲ್ಲಿ ಏನಿದೆ?
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಇಡಿ ಸಮನ್ಸ್ ನೀಡಿರುವುದು ಬಿಜೆಪಿ ಸರ್ಕಾರದ ಸೇಡಿನ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ? ಈ ಸೇಡಿನ ರಾಜಕೀಯ ಸೋನಿಯಾ ಅವರ ವಿರುದ್ಧ ಅಷ್ಟೇ ಅಲ್ಲ ಕಾಂಗ್ರೆಸ್ ಬೆಂಬಲಿಸುವ ಸಾಮಾನ್ಯರ ವಿರುದ್ಧವೂ ಹೌದು. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿಗೆ ಇಡಿ ಸಮನ್ಸ್
We know that ED in the hands of the Centre has become HD- Harassment Directorate. After failed economic policies, BJP with its flawed ideology is left with the only option of harassing a senior politician like Sonia Gandhi ji, with a wild dream of crushing the INC leadership.
2/2— DK Shivakumar (@DKShivakumar) June 1, 2022
ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ED ಈಗ HD (Harassment Directorate) ಆಗಿದೆ. ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆರ್ಥಿಕ ನೀತಿಗಳು ವಿಫಲಗೊಂಡ ನಂತರ INC ನಾಯಕತ್ವವನ್ನು ಹತ್ತಿಕ್ಕುವ ಬಿಜೆಪಿ ಕನಸಿಗೆ ಆಯ್ಕೆಯಾಗಿ ಉಳಿದಿರುವುದು ಹಿರಿಯ ನಾಯಕರಿಗೆ ಕಿರುಕುಳ ನೀಡುವ ಏಕೈಕ ಅಡ್ಡದಾರಿ. ಇದನ್ನೂ ಓದಿ: ಲೆಕ್ಕಕ್ಕೆ ಸಿಗದಷ್ಟು ಹಣ ಬೆಂಗಳೂರಿನಿಂದ ದೆಹಲಿಗೆ ಅಕ್ರಮವಾಗಿ ವರ್ಗಾವಣೆ- ಡಿಕೆಶಿ ವಿರುದ್ಧ ಇಡಿ ಆರೋಪ