ಬಾದಾಮಿ ಕೇಕ್ ಮಾಡುವ ಸುಲಭ ವಿಧಾನ – ನೀವೊಮ್ಮೆ ಟ್ರೈಮಾಡಿ

By
1 Min Read

ಮಕ್ಕಳು ಯಾವಾಗಲೂ ಇಷ್ಟ ಪಟ್ಟು ತಿನ್ನುವ ತಿನಿಸು ಕೇಕ್ (Cake). ಇಂದು ನಾವು ತುಂಬಾ ಸುಲಭವಾಗಿ ಬಾದಾಮಿ ಕೇಕ್ (Almond Cake) ಅನ್ನು ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವು ಇದನ್ನು ಮನೆಯಲ್ಲಿ ಮಾಡಿ, ಮಕ್ಕಳಿಗೆ ನೀಡಿ.

ಬೇಕಾಗುವ ಪದಾರ್ಥಗಳು:
ಸಕ್ಕರೆ ಪುಡಿ – ಒಂದೂವರೆ ಕಪ್
ಹಾಲು – ಮುಕ್ಕಾಲು ಕಪ್
ಮೊಟ್ಟೆ – 1
ಬಾದಾಮಿ ಸಾರ – 2 ಟೀಸ್ಪೂನ್
ಮೈದಾ ಹಿಟ್ಟು – ಒಂದೂವರೆ ಕಪ್
ಬೇಕಿಂಗ್ ಪೌಡರ್ – ಅರ್ಧ ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಬೆಣ್ಣೆ – ಅರ್ಧ ಕಪ್
ಕತ್ತರಿಸಿದ ಬಾದಾಮಿ – ಕಾಲು ಕಪ್ ಇದನ್ನೂ ಓದಿ: ಚಹಾದೊಂದಿಗೆ ಸವಿಯಿರಿ ಗೋಡಂಬಿ ಬಿಸ್ಕತ್ತು

ಮಾಡುವ ವಿಧಾನ:
* ಮೊದಲಿಗೆ ಕೇಕ್ ತಯಾರಿಸುವ ಪಾತ್ರೆಗೆ ಬಟರ್ ಪೇಪರ್ ಹಾಕಿ, ಅದರಲ್ಲಿ ಕತ್ತರಿಸಿದ ಬಾದಾಮಿಯನ್ನು ಹರಡಿ ಪಕ್ಕಕ್ಕಿಡಿ.
* ಒಂದು ಮಧ್ಯಮ ಗಾತ್ರದ ಪಾತ್ರೆಯಲ್ಲಿ ಸಕ್ಕರೆ, ಹಾಲು, ಮೊಟ್ಟೆ, ಬಾದಾಮಿ ಸಾರವನ್ನು ಹಾಕಿ ಮಿಕ್ಸ್ ಮಾಡಿ.
* ಈಗ ಅದಕ್ಕೆ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಹಾಗೂ ಉಪ್ಪು ಸೇರಿಸಿ, ಮಿಕ್ಸ್ ಮಾಡಿ.
* ಬೆಣ್ಣೆಯನ್ನು ಕರಗಿಸಿ ಮಿಶ್ರಣಕ್ಕೆ ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿ.
* ಈಗ ಮೊದಲೇ ಸಿದ್ದಪಡಿಸಿದ್ದ ಕೇಕ್ ತಯಾರಿಸುವ ಪಾತ್ರೆಗೆ ಹಿಟ್ಟನ್ನು ಸುರಿಯಿರಿ.
* ಓವನ್‌ನಲ್ಲಿ ಕೇಕ್ ಪಾತ್ರೆಯನ್ನಿರಿಸಿ, 350 ಡಿಗ್ರಿ ಬಿಸಿಯಲ್ಲಿ ಸುಮಾರು 35-40 ನಿಮಿಷಗಳ ವರೆಗೆ ಬೇಯಿಸಿ.
* ಈಗ ಓವನ್‌ನಿಂದ ಕೇಕ್ ಅನ್ನು ತೆಗೆದು, ಆರಲು ಬಿಡಿ.
* ನಿಧಾನವಾಗಿ ಕೇಕ್ ಅನ್ನು ಪಾತ್ರೆಯಿಂದ ಬೇರ್ಪಡಿಸಿ.
* ಈಗ ಪುಡಿ ಸಕ್ಕರೆಯನ್ನು ಕೇಕ್ ಮೇಲೆ ಸಿಂಪಡಿಸಿ.
* ಇದೀಗ ಬಾದಾಮಿ ಕೇಕ್ ತಯಾರಾಗಿದ್ದು, ಮಕ್ಕಳಿಗೆ ಸವಿಯಲು ನೀಡಿ. ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

Live Tv
[brid partner=56869869 player=32851 video=960834 autoplay=true]

Share This Article
Exit mobile version