Thursday, 21st February 2019

Recent News

ಹೃದಯಾಘಾತವಾದರೂ ಕರ್ತವ್ಯಪ್ರಜ್ಞೆ ಮೆರೆದ ಚಾಲಕ!

ಕೊಪ್ಪಳ: ವಾಯುವ್ಯ ಕರ್ನಾಟಕ ಬಸ್ ಚಾಲನೆ ಮಾಡುವಾಗ ಚಾಲಕನಿಗೆ ಹೃದಯಾಘಾತ ಸಂಭವಿಸಿದ್ದು, ಚಾಲಕ ಸುರಕ್ಷಿತವಾಗಿ ಬಸ್ಸನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

50 ಜನ ಪ್ರಯಾಣಿಕರಿದ್ದ ಬಸ್ ಹೈದ್ರಾಬಾದ್ ದಿಂದ ಹುಬ್ಬಳ್ಳಿಗೆ ಹೊರಟಿತ್ತು. ಕೊಪ್ಪಳ ತಾಲೂಕು ಬಸಾಪೂರ ಗ್ರಾಮದ ಬಳಿ ಬರುತ್ತಿದ್ದಂತೆಯೇ ಮಾರ್ಗಮಧ್ಯದಲ್ಲಿಯೇ ಚಾಲಕ ಶಿವಣ್ಣ ಅವರಿಗೆ ಹೃದಯಾಘಾತ ಸಂಭವಿಸಿದೆ.

ತನಗೆ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಶಿವಣ್ಣ ಸ್ವಲ್ಪವೂ ವಿಚಲಿತರಾಗದೇ ಬಸ್‍ನ್ನು ಸುರಕ್ಷಿತವಾಗಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಬಸ್‍ನಲ್ಲಿದ್ದ 50 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೀವ್ರ ಹೃದಯಾಘಾತದಿಂದ ಬಳುತ್ತಿದ್ದ ಶಿವಣ್ಣ ಅವರನ್ನು ನೋಡಿದ ನಿರ್ವಾಹಕ ಪ್ರಯಾಣಿಕರ ಸಹಾಯದಿಂದ ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂಥ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಪ್ರಯಾಣಿಕರ ಪ್ರಾಣವನ್ನು ಉಳಿಸಿದ ಶಿವಣ್ಣ ಕರ್ತವ್ಯ ಪ್ರಜ್ಞೆಯನ್ನು ಸಾರ್ವಜನಿಕರು ಹಾಗೂ ಪ್ರಯಾಣಿಕರು ಕೊಂಡಾಡಿದ್ದಾರೆ.

Leave a Reply

Your email address will not be published. Required fields are marked *