Connect with us

Latest

ದಿಢೀರ್ 99 ರೂ. ಕಡಿತ – ಕ್ಷಮೆ ಕೇಳಿ ಸ್ಪಷ್ಟನೆ ನೀಡಿದ ವೊಡಾಫೋನ್

Published

on

ಬೆಂಗಳೂರು: ವೊಡಾಫೋನ್ ಗ್ರಾಹಕರಿಗೆ ಇಂದು ಬೆಳಗ್ಗೆ ಶಾಕ್ ಕಾದಿತ್ತು. ಅಂತಾರಾಷ್ಟ್ರೀಯ ರೋಮಿಂಗ್‍ಗಾಗಿ 99 ರೂ. ಕಡಿತ ಮಾಡಲಾಗಿದೆ ಎಂಬ ಮಸೇಜ್ ಬಂದಿತ್ತು.

“ಪ್ರೀತಿಯ ಗ್ರಾಹಕರೇ 30 ದಿವಸಗಳ ಅಂತಾರಾಷ್ಟ್ರೀಯ ರೋಮಿಂಗ್ ಬಾಡಿಗೆ ಮೊತ್ತವಾಗಿ 99 ರೂ. ಕಡಿತಮಾಡುತ್ತಿದ್ದು, ಈ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ” ಎಂಬ ಮಸೇಜ್ ಬಂದಿತ್ತು. ಗ್ರಾಹಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೊಡಾಫೋನ್ ಕಂಪನಿಯನ್ನು ಪ್ರಶ್ನಿಸಿದ ಪರಿಣಾಮ ಟ್ರೆಂಡ್ ಸೃಷ್ಟಿಯಾಗಿತ್ತು.

ಜನ ಪ್ರಶ್ನಿಸುತ್ತಿದ್ದಂತೆ, ಕ್ಷಮಿಸಿ. ತಾಂತ್ರಿಕ ಸಮಸ್ಯೆಯಿಂದಾಗಿ ಈ ಮೆಸೇಜ್ ಬಂದಿದೆ. ಕಡಿತಗೊಂಡಿರುವ ಹಣವನ್ನು ಪ್ರಿಪೇಯ್ಡ್ ಗ್ರಾಹಕರಿಗೆ ಮರಳಿ ಪಾವತಿಸಲಾಗುವುದು ಎಂದು ವೊಡಾಫೋನ್ ಹೇಳಿದೆ.

ನಾನು ಯಾವುದೇ ಅಂತರಾಷ್ಟ್ರೀಯ ಕರೆ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ ನಾನು ಅನ್‍ಲಿಮಿಟೆಡ್ ಪ್ಯಾಕ್ ಹಾಕಿದ್ದೇನೆ. ನನ್ನ ಅನುಮತಿ ಇಲ್ಲದೇ ಹೇಗೆ ಅಂತಾರಾಷ್ಟ್ರೀಯ ರೋಮಿಂಗ್‍ಗೆ ಹಣವನ್ನು ಕಡಿತ ಮಾಡಲಾಗಿದೆ. ಕೂಡಲೇ ಹಣವನ್ನು ನನ್ನ ಖಾತೆಗೆ ಹಾಕಿ ಎಂದು ಪ್ರಶ್ನಿಸುತ್ತಿದ್ದಾರೆ. ಈಗ ವೊಡಾಫೋನ್ 99 ರೂ. ಕಡಿತ ಮಸೇಜ್ ಸಂಬಂಧ ಎದ್ದಿದ್ದ ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡಿ ತೆರೆ ಎಳೆದಿದೆ.

’99 ರೂಪಾಯಿ’ ಟ್ರೆಂಡ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜನ ತಮ್ಮದೆ ಮಿಮ್ಸ್ ಗಳನ್ನು ಪ್ರಕಟಿಸುತ್ತಿದ್ದಾರೆ.