Connect with us

Latest

ಮಧ್ಯರಾತ್ರಿ ಡಿವೈಡರ್‍ಗೆ ಕಾರ್ ಡಿಕ್ಕಿ ಹೊಡೆದ್ಲು- ಕೇಳಲು ಬಂದ ಪೊಲೀಸ್‍ಗೆ ಕಿಸ್ ಮಾಡಿದ್ಲು!

Published

on

ಕೋಲ್ಕತ್ತಾ: ಮದ್ಯದ ಅಮಲಿನಲ್ಲಿ ರಸ್ತೆಯ ಡಿವೈಡರ್ ಗೆ ಕಾರ್ ಡಿಕ್ಕಿ ಹೊಡೆದಿದ್ದು, ಕೇಳಲು ಬಂದ ಪೊಲೀಸ್ ಪೇದೆಯೊಬ್ಬರಿಗೆ ಮಹಿಳೆಯೊಬ್ಬರು ಮುತ್ತಿಟ್ಟ ವಿಚಿತ್ರ ಘಟನೆಯೊಂದು ಕೋಲ್ಕತ್ತಾದಲ್ಲಿ ನಡೆದಿದೆ.

ಈ ಘಟನೆ ಜುಲೈ 26ರಂದು ಚಿಂಗ್ರಿಘಾಟಾ ಸಮೀಪದ ಇಎಮ್ ಬೈಪಾಸ್ ಬಳಿ ರಾತ್ರಿ ನಡೆದಿದೆ. ಸದ್ಯ ಮಹಿಳೆ ಹಾಗೂ ಆಕೆಯ ಜೊತೆಗಿದ್ದ ಮತ್ತೊಬ್ಬ ಮಹಿಳೆ ಹಾಗೂ ಓರ್ವ ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?: 38 ವರ್ಷದ ಮಹಿಳೆಯೊಬ್ಬರು ತನ್ನ ಕಾರಿನಲ್ಲಿ ಇಬ್ಬರನ್ನು ಕೂರಿಸಿಕೊಂಡು ಹೋಗುತ್ತಿದ್ದರು. ಮದ್ಯದ ಅಮಲಿನಲ್ಲಿದ್ದ ಪರಿಣಾಮ ನಿಯಂತ್ರಣ ತಪ್ಪಿ ಕಾರ್ ರಸ್ತೆ ಪಕ್ಕದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯನ್ನು ಕಣ್ಣಾರೆ ಕಂಡ ಟ್ಯಾಕ್ಸಿ ಡರೈವರ್‍ವೊಬ್ಬರು ಮಹಿಳೆಗೆ ಸಹಾಯ ಮಾಡಲು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದ್ರೆ ನಶೆಯಲ್ಲಿದ್ದ ಮಹಿಳೆ ಸಹಾಯ ಮಾಡಲು ಬಂದ ವ್ಯಕ್ತಿಯನ್ನೇ ಥಳಿಸಿದ್ದಾರೆ. ಅದೇ ಸಂದರ್ಭದಲ್ಲಿ ಬಿಧಾನಗರ್ ಪೊಲೀಸ್ ಠಾಣೆಯ ಪೇದೆಯೊಬ್ಬರು ಬಂದು ಆಕೆಯನ್ನು ಕಾರಿನಿಂದ ಹೊರಗೆ ತರಲು ಪ್ರಯತ್ನಿಸಿದ್ದಾರೆ. ಆಗ ಆಕೆ ಪೇದೆಯನ್ನು ಎಳೆದು ತಬ್ಬಿಕೊಂಡು ಬಲವಂತವಾಗಿ ಮುತ್ತಿಟ್ಟಿದ್ದಾಳೆ.

ಬಳಿಕ ಆ ಪೇದೆ ಮಹಿಳಾ ಪೇದೆಯೊಬ್ಬರ ಸಹಾಯ ಪಡೆದು ಕಾರ್ ಚಾಲಕಿ ಮತ್ತು ಆಕೆಯ ಕಾರಿನಲ್ಲಿದ್ದ ಇಬ್ಬರನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಈ ಮೂವರು ಉತ್ತರ ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್ ನಿವಾಸಿಗಳಾಗಿದ್ದು, ಕುಡಿದು ವಾಹನ ಚಾಲನೆ ಹಾಗೂ ವೇಗವಾದ ಚಾಲನೆ ಆರೋಪದ ಮೇಲೆ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.