Connect with us

Crime

ಆಯುರ್ವೇದ ಔಷಧವೆಂದು ಡ್ರಗ್ ಸಾಗಣೆ- 1 ಸಾವಿರ ಕೋಟಿ ಬೆಲೆಯ ಮಾದಕ ವಸ್ತು ವಶಕ್ಕೆ

Published

on

ಮುಂಬೈ: ಅಫ್ಘಾನಿಸ್ಥಾನದಿಂದ ಕಳ್ಳಸಾಗಣೆ ಮಾಡಿದ್ದ ಸುಮಾರು 1 ಸಾವಿರ ಕೋಟಿ ರೂ. ಬೆಲೆ ಬಾಳುವ 191 ಕೆ.ಜಿ. ಡ್ರಗ್‍ನ್ನು ವಶಪಡಿಸಿಕೊಳ್ಳಲಾಗಿದೆ.

ಸಿಮಾ ಸುಂಕ ಹಾಗೂ ಆದಾಯ ಡೈರಕ್ಟರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್(ಡಿಆರ್ ಐ) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅಪಾರ ಪ್ರಮಾಣದ ಡ್ರಗ್ ವಶಪಡಿಸಿಕೊಂಡಿದ್ದಾರೆ. ನವಿ ಮುಂಬೈನ ನವ ಸೇವಾ ಕೋಟೆ ಬಳಿ ಈ ಡ್ರಗ್‍ನ್ನು ಸಂಗ್ರಹಿಸಿಡಲಾಗಿತ್ತು. ಅಫ್ಘಾನಿಸ್ಥಾನದಿಂದ ಕಳ್ಳ ಸಾಗಣೆ ಮೂಲಕ ಮುಂಬೈಗೆ ಸಾಗಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಪೈಪ್‍ಗಳ ಮೂಲಕ ಅಫ್ಘಾನಿಸ್ಥಾನದಿಂದ ಡ್ರಗ್‍ನ್ನು ಕಳ್ಳ ಸಾಗಣೆ ಮಾಡಲಾಗಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಮದನ್ನು ದಾಖಲಿಸುತ್ತಿದ್ದ ಇಬ್ಬರು ಸಿಮಾ ಸುಂಕ ಏಜೆಂಟ್‍ಗಳನ್ನು ಬಂಧಿಸಲಾಗಿದ್ದು, ಕಳ್ಳ ಸಾಗಣೆಗಾರರು ಪ್ಲಾಸ್ಟಿಕ್ ಪೈಪ್‍ಗಳ ಮೂಲಕ ಡ್ರಗ್ ಸಾಗಿಸಿದ್ದು, ಪ್ಲಾಸ್ಟಿಕ್ ಪೈಪ್‍ಗಳಿಗೆ ಬಂಬುಗಳ ರೀತಿ ಬಣ್ಣ ಬಳಿದು, ಇದು ಆಯುರ್ವೇದಿಕ್ ಔಷಧ ಎಂದು ಹೇಳಿ ಸಾಗಣೆ ಮಾಡಿದ್ದಾರೆ.

ಇಂಪೋರ್ಟರ್ ಹಾಗೂ ಫೈನಾನ್ಶಿಯರ್ ಸೇರಿ ಇನ್ನೂ ನಾಲ್ವರನ್ನು ದೆಹಲಿಯಲ್ಲಿ ಹಿಡಿಯಲಾಗಿದ್ದು, ಮುಂಬೈಗೆ ಕರೆತರಲಾಗುತ್ತಿದೆ. ಇದು ನಗರದ ಅತೀ ದೊಡ್ಡ ಮಾದಕವಸ್ತು ದಂಧೆಯ ಜಾಲವಾಗಿದ್ದು, ಬಂದರಿನಲ್ಲಿ ಸಿಮಾ ಸುಂಕ ಅಧಿಕಾರಿ ಸರಕುಗಳನ್ನು ತಪ್ಪಾಗಿ ಘೋಷಿಸಿರುವ ಕುರಿತು ಎಚ್ಚರಿಕೆ ನೀಡಿದ ಬಳಿಕ ಈ ಕೃತ್ಯ ಎಸಗಲಾಗಿದೆ ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *