Connect with us

Cinema

ಉಪ್ಪು ತಿಂದವರು ನೀರು ಕುಡಿಯಲಿ: ಡ್ರಗ್ಸ್ ಮಾಫಿಯಾ ಬಗ್ಗೆ ಜಗ್ಗೇಶ್ ಮಾತು

Published

on

-ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರ್ತಾರೆ
-ಇಂದು ಎರಡು ಸಿನಿಮಾಗೆ ಕುಬೇರನ ಮಕ್ಕಳು

ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಕೆಲ ಸ್ಯಾಂಡಲ್‍ವುಡ್ ತಾರೆಯರ ಹೆಸರು ಕೇಳಿ ಬಂದಿದ್ದರ ಬಗ್ಗೆ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಉಪ್ಪುತಿಂದವರು ನೀರು ಕುಡಿಯಲಿ. ಬದುಕುವ ಹಠ ಇದ್ದವರು ಹಿಮಾಲಯ ಏರುತ್ತಾರೆ. ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ನಾನು ನನ್ನ ಕನಸು, ಅನ್ನ ಜೀವನ ಅಂತ ಬಂದವರ ಕಾಲಮಾನದವ ವ್ಯಕ್ತಿ. ಬಣ್ಣ ಹಚ್ಚುವ ಮುನ್ನ ಶಾರದೆ ಸ್ಮರಿಸಿ ಬಣ್ಣಕ್ಕೆ ಮುಖ ಕೊಡುತ್ತಿದ್ದೆವು. ನಮ್ಮ ಕಾಲ ಕಲಾವಿದರು ಅಂತ ಯಾರಾದರು ಕರೆದರೆ ಊಟಕ್ಕೆ ಹೋಗಿ 2 ಪೆಗ್‍ಗೆ ಸೀಮಿತವಾಗಿತ್ತು. ಇಂದು ನಶೆ ಸದ್ದಿನದೆ ಚರ್ಚೆ ಆಗಿಬಿಟ್ಟಿದೆ. ಇದರ ಬಗ್ಗೆ ಮಾತಾಡಿದರೆ ಸಾಕು ಪರ-ವಿರೋಧದ ಅನಿಷ್ಠ ಮನದ ನೆಮ್ಮದಿಗೆ ಭಂಗ ತರುತ್ತದೆ.

ಅಪ್ಪನಿಗೆ 1981ರಲ್ಲಿ 5,000 ರೂ. ಸಾಲ ಕೇಳಿದಕ್ಕೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು ತಾಕತ್ತಿದ್ದರೆ ಹೋಗಿ ದುಡಿ ಎಂದು ಹೊರ ದೂಡಿದ್ದರು. ಹಠಕ್ಕೆ ಬಿದ್ದು ದುಡಿಮೆಗೆ ಮದ್ರಾಸಿ(ಚೆನ್ನೈ)ಗೆ ಹೋದೆ. ಅಪಮಾನ ಮಾಡಿ ಅಂದು ಅಪ್ಪ ನನಗೆ ಜೀವನ ಕಲಿಸಿದ. ಇಂದು ಮಕ್ಕಳ ಹಾಗೆ ಬೆಳೆಸುವ ತಂದೆಯೂ ಇಲ್ಲ, ತಲೆಮಾರು ಇಲ್ಲ. ಈಗ ಎಲ್ಲ ಕ್ಷೇತ್ರ ಏನಿದ್ದರು ನಾನು ನನ್ನಿಷ್ಟದ ಜೀವನ.

ನಾವು 30 ಸಿನಿಮಾಗಳಲ್ಲಿ ನಟಿಸಿದರೂ ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು, ಕೊಟ್ಟ ಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿ ಸೀಮೆಎಣ್ಣೆಗೆ ಕ್ಯೂ ನಿಂತವರು. ಇಂದು ಎರಡು ಸಿನಿಮಾಗೆ ಕುಬೇರನ ಮಕ್ಕಳು. ಹೇಗೆ ಇಂಥ ಕ್ಯಾಚ್ ನನಗೆ 57 ವರ್ಷಕ್ಕೂ ಅರ್ಥವಾಗಿಲ್ಲ. 2015ರಿಂದ ಮೋಜು ಮಸ್ತಿ, ಕುಸ್ತಿ ಸಿನಿಮಾ ಜೀವನ. ಅಂದು ಒಂದು ಮಾತಿಗೆ ಅಳುತ್ತಿದ್ದೇವು.

ಇಂದು ಮಾಧ್ಯಮ ಮಿತ್ರರು ಮನೆಯ ಹತ್ತಿರ ಬಂದಿದ್ದರಂತೆ ಕ್ಷಮೆಯಿರಲಿ. ನಾನು ಊರಿಗೆ ಹೋಗಿರುವೆ. ನಿಮ್ಮ ಪ್ರೀತಿಗೆ ಧನ್ಯವಾದ. ಇಂದು ಏನೇ ಮಾತಾಡಿದ್ರೂ ಅದಕ್ಕೆ ನೂರು ತರಹ ಪರ-ವಿರೋಧ ಚರ್ಚೆಯಾಗುತ್ತದೆ. ಯಾಕೆ ಬೇಕು ಉಪ್ಪು ತಿಂದವರು ನೀರು ಕುಡಿಯಲಿ. ಬದುಕುವ ಹಠ ಇದ್ದವರು ಹಿಮಾಲಯ ಏರುತ್ತಾರೆ. ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ. ಅದು ಅವರವರ ಹಣೆಬರಹ.

ನಾನು ನಟನಾಗಿ ಅಲ್ಲ ಒಬ್ಬ ತಂದೆ ಸ್ಥಾನದಲ್ಲಿ ನಿಂತು ನನ್ನ ಕಲಾಬಂಧುಗಳಿಗೆ ಹೇಳುವುದೊಂದೆ ನೀವು ಚನ್ನಾಗಿದ್ದೀರ ಮಾತ್ರ ದುನಿಯಾ. ಯಾರೋ ಕೆಲ ತಲೆಮಾಸಿದವರ ತಪ್ಪಿಗೆ ಇಡಿಚಿತ್ರರಂಗ ಅನ್ನಬೇಡಿ. ಹಾದಿ ತಪ್ಪಿದವರ ಬಹಿರಂಗಪಡಿಸಿ ಬುದ್ಧಿ ಕಲಿಸಿ. ಕೆಲವರ ತಪ್ಪಿಗೆ ಚಿತ್ರರಂಗದ ಪ್ರಾಮಾಣಿಕ ಕಲಾವಿದರು ನೊಂದಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *