Connect with us

Districts

ಹೆಲ್ಮೆಟ್ ಹಾಕದೇ ಲಾರಿ ಓಡಿಸಿದ್ದಕ್ಕೆ ಚಾಲಕನಿಗೆ ಬಿತ್ತು ದಂಡ

Published

on

ಕಾರವಾರ: ಹೆಲ್ಮೆಟ್ ಧರಿಸದ ಬೈಕ್ ಚಾಲಕರಿಗೆ ನೋಟಿಸ್ ನೀಡುವುದು ಸಾಮಾನ್ಯ. ಆದರೆ ಲಾರಿ ಚಾಲಕರಿಗೆ ದಂಡ ವಿಧಿಸಿದ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.

ಜಿಲ್ಲೆಯ ದಾಂಡೇಲಿ ನಗರದಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂದು ಲಾರಿ ಚಾಲಕರೊಬ್ಬರಿಗೆ ಪೊಲೀಸರು ದಂಡ ವಿಧಿಸಿ ನಗೆಪಾಟಲಿಗೆ ಈಡಾಗಿದ್ದಾರೆ. ದಾಂಡೇಲಿಯಲ್ಲಿ ಚಾಲಕ ನಝೀರ್ ಅಹ್ಮದ್ ಅಲ್ಲಾಬಕ್ಷ  408 ವಾಹನವನ್ನು ಹೆಲ್ಮೆಟ್ ಇಲ್ಲದೇ ಚಲಾಯಿಸಿದ್ದಾರೆ.

ಹೆಲ್ಮೆಟ್ ಹಾಕದ ಕಾರಣ ದಾಂಡೇಲಿ ಗ್ರಾಮೀಣ ಪೊಲೀಸರು ಚಾಲಕ ನಝೀರ್ ಅಹ್ಮದ್ ಮನೆಗೆ ನೋಟೀಸ್ ಕಳುಹಿಸಿದ್ದಾರೆ. ನೋಟೀಸ್‌ನಲ್ಲಿ ವಾಹನದ ಸಂಖ್ಯೆ ನಮೂದಿಸಿದ್ದು ಲಾರಿ ಎಂದು ಬರೆಯಲಾಗಿದೆ.

ಲಾರಿ ಓಡಿಸುವಾಗ ಹೆಲ್ಮೆಟ್ ಇಲ್ಲದೇ ಸರ್ಕಾರದ ನಿಯಮ ಉಲ್ಲಂಘನೆಗಾಗಿ 500 ದಂಡ ವಿಧಿಸಲಾಗಿದೆ ಎಂದು ತಿಳಿಸಿ ದಾಂಡೇಲಿ ಗ್ರಾಮಿಣ ಠಾಣೆಯ ಉಪನಿರೀಕ್ಷಕರು ಸಹಿ ಮಾಡಿದ್ದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.