Connect with us

Crime

ಮಾಲೀಕನಿಂದ ಮಹಿಳೆಯ ರೇಪ್ – ಏನೂ ತಿಳಿಯದಂತೆ ಕಾರ್ ಚಲಾಯಿಸಿದ ಚಾಲಕ

Published

on

– ಉದ್ಯೋಗ ಕೊಡಿಸೋದಾಗಿ ನಂಬಿಸಿ ಅತ್ಯಾಚಾರ

ಭೋಪಾಲ್: ಉದ್ಯೋಗ ನೀಡುವದಾಗಿ ನಂಬಿಸಿ ಚಲಿಸುತ್ತಿದ್ದ ಕಾರಿನಲ್ಲಿಯೇ ಮಹಿಳೆಯನ್ನ ಅತ್ಯಾಚಾರಗೈದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಕಾರ್ ನಲ್ಲಿ ಮಾಲೀಕ ರೇಪ್ ಮಾಡ್ತಿದ್ರೆ ಚಾಲಕ ಮಾತ್ರ ಏನು ತಿಳಿಯದಂತೆ ಕಾರ್ ಚಲಾಯಿಸಿದ್ದಾನೆ.

ಗ್ವಾಲಿಯರ್ ಜಿಲ್ಲೆಯ ಕುಲೈಥ ಗ್ರಾಮದ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ರಾಮಬಾಬು ಗುರ್ಜರ್ ಎಂಬಾತ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸೋದಾಗಿ ಕಾರಿನಲ್ಲಿ ಹತ್ತಿಸಿಕೊಂಡಿದ್ದನು. ಗ್ವಾಲಿಯರ್ ನಿಂದ ಚಿಡಿಯಾಘರ ಮಾರ್ಗ ಮಧ್ಯೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಚಾರ ಎಸಗಲಾಗಿದೆ. ನಂತರ ಹೋಟೆಲ್ ನಲ್ಲಿ ಕರೆದುಕೊಂಡು ಅತ್ಯಾಚಾರ ಮಾಡಿದರು.

ಘಟನೆ ಸಂಬಂಧ ಇಂದರ್‍ಗಂಜ್ ಪೊಲೀಸ್ ಠಾಣೆಯಲ್ಲಿ ರಾಮಬಾಬು ಗುರ್ಜರ್ ಮತ್ತು ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಕ್ರೈಂ ಬ್ರ್ಯಾಂಚ್ ಡಿಎಸ್‍ಪಿ ವಿಜಯ್ ಬದೌರಿಯಾ ಹೇಳಿದ್ದಾರೆ.

 

Click to comment

Leave a Reply

Your email address will not be published. Required fields are marked *