Advertisements

ಹೊಸ ವರ್ಷದ ಗುಂಗಲ್ಲಿ ಕುಡಿದರೆ ಬೀಳುತ್ತೆ ದಂಡ!

– ಬೆಂಗಳೂರಿನ ಎಲ್ಲಾ ಪ್ರದೇಶಗಳಲ್ಲಿ ನಾಕಾಬಂದಿ
– ಕುಡಿದ ವಾಹನ ಓಡಿಸಿದ್ರೆ ದಂಡ ಗ್ಯಾರಂಟಿ

ಬೆಂಗಳೂರು: ಹೊಸ ವರ್ಷದ ಆಚರಣೆ ಗುಂಗಲ್ಲಿ ಕುಡಿದು ಪಾರ್ಟಿ ಮಾಡೋ ಮುನ್ನ ಹುಷಾರಾಗಿರಿ. ರಾಜಧಾನಿಯ ಎಲ್ಲಾ ಏರಿಯಾಗಳಲ್ಲಿ ನಾಕಾಬಂದಿ ಹಾಕಿ ವಾಹನ ಚಾಲಕರ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಮಾಡಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

Advertisements

ಒಂದೆಡೆ ಹೊಸ ವರ್ಷ ಸಂಭ್ರಮಕ್ಕೆ ಪಾರ್ಟಿ ಮಾಡೋಕೆ ಅನುಮತಿ ಕೊಡುವ ಪೊಲೀಸರೇ ಮತ್ತೊಂದೆಡೆ ಕುಡಿದು ವಾಹನ ಚಲಾಯಿಸುವ ಮಂದಿಗೆ ಕಾಯುತ್ತಾ ಕುಳಿತಿರುತ್ತಾರೆ. ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿದವರನ್ನು ಹಿಡಿಯಲು ಪೊಲೀಸರು ಸಜ್ಜಾಗಿದ್ದಾರೆ. ಇಂದು ರಾತ್ರಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ.

Advertisements

ಬೆಂಗಳೂರಿನ ಎಲ್ಲಾ ಏರಿಯಾಗಳಲ್ಲಿ ನಾಕಾಬಂದಿ ಹಾಕಿ ವಾಹನ ಚಾಲಕರ ತಪಾಸಣೆಯನ್ನು ಟ್ರಾಫಿಕ್ ಪೊಲೀಸರು ಮಾಡಲಿದ್ದಾರೆ. ಪಬ್, ಬಾರ್, ರೆಸ್ಟೋರೆಂಟ್, ಹೊಟೇಲ್‍ಗಳಲ್ಲಿ ಪಾರ್ಟಿ ಮಾಡಿಕೊಂಡು ಕುಡಿದು ವಾಹನದಲ್ಲಿ ರಸ್ತೆಗೆ ಬಂದ್ರೆ ದಂಡ ಗ್ಯಾರೆಂಟಿ. ಪಾರ್ಟಿ ಮಾಡಿ ಹೊರಡುವ ಮುನ್ನ ಒಬ್ಬ ಚಾಲಕ ಅಥವಾ ಖಾಸಗಿ ಕ್ಯಾಬ್ ಬುಕ್ ಮಾಡಿಕೊಂಡರೆ ಉತ್ತಮ. ಇಲ್ಲವಾದರೆ ಫೈನ್ ಕಟ್ಟಲು ತಯಾರಾಗಬೇಕು.

ಹೊಸ ವರ್ಷದ ಗುಂಗಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತಗಳಾದ ಪ್ರಕರಣಗಳು ಹೆಚ್ಚಾಗಿವೆ. ಆದರಿಂದ ಈ ರೀತಿ ಘಟನೆಗಳನ್ನು ತಡೆಗಟ್ಟಲು ಪೊಲೀಸರು ಈ ನಿರ್ಧಾರವನ್ನು ಮಾಡಿದ್ದಾರೆ.

Advertisements

ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಆಶೋಕನಗರ ಅಲ್ಲದೆ ನಗರದ ಎಲ್ಲಾ ಕಡೆ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ತಪಾಸಣೆ ಮಾಡಲಿದ್ದಾರೆ. ಇಂದು ರಾತ್ರಿ 8 ರಿಂದ ಮಂಗಳವಾರ ಬೆಳಗ್ಗೆ 8 ರವರೆಗೆ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Advertisements
Exit mobile version