Saturday, 15th December 2018

Recent News

ಹಿಂದಿಯ ಜನಪ್ರಿಯ ಕಾರ್ಯಕ್ರಮಕ್ಕೆ ಕನ್ನಡತಿ ಚಿತ್ರಾಲಿ ಆಯ್ಕೆ

ಬೆಂಗಳೂರು: ಹಿಂದಿಯ ದೊಡ್ಡ ಜನಪ್ರಿಯ ಕಾರ್ಯಕ್ರಮವೊಂದಕ್ಕೆ `ಡ್ರಾಮಾ ಜೂನಿಯರ್’ ನ ವಿನ್ನರ್ ಚಿತ್ರಾಲಿ ಆಯ್ಕೆಯಾಗಿದ್ದಾಳೆ.

ಖಾಸಗಿ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾಗಿದ್ದ `ಡ್ರಾಮಾ ಜೂನಿಯರ್’ ನ ಮೊದಲ ಸೀಸನ್ ನಲ್ಲಿ ಪುಟ್ಟ ಬಾಲಕಿ ಚಿತ್ರಾಲಿ ವಿನ್ನರ್ ಆಗಿದ್ದಳು. ಆಕೆಯ ನಟನೆಗೆ ಕನ್ನಡದ ಜನತೆಯೇ ಮನಸೋತಿದ್ದರು. ಈಗ ಹಿಂದಿಯ ಕಾರ್ಯಕ್ರಮಕ್ಕೂ ಆಯ್ಕೆ ಆಗಿದ್ದಾಳೆ.

ಮೇ 8 ರಂದು ಹಿಂದಿಯ ಜೀ ವಾಹಿನಿಯಲ್ಲಿ ಪ್ರಸಾರ ಆಗುವ `ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್ ಸೀಸನ್ 3′ ನ ಆಡಿಷನ್ ನ ನಡೆದಿತ್ತು. ಆ ಆಡಿಷನ್ ನಲ್ಲಿ ಚಿತ್ರಾಲಿ ಕೂಡ ಭಾಗವಹಿಸಿದ್ದಳು. ಆಡಿಷನಲ್ಲಿ ಚಿತ್ರಾಲಿಯ ಅಭಿನಯ ನೋಡಿ ತೀರ್ಪುಗಾರರಾದ ನಟಿ ಸೋನಾಲಿ ಬೆಂದ್ರೆ, ಅನುರಾಗ್ ಬಸು ಹಾಗೂ ವಿವೇಕ್ ಒಬೆರಾಯ್ ಫಿದಾ ಆಗಿದ್ದರು. ಈಗ ಆ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಮೂಲಕ ಹಿಂದಿಯಲ್ಲಿ ಕನ್ನಡದ ಕಂದ ಕಾಲಿಟ್ಟಿದ್ದಾಳೆ.

ಚಿತ್ರಾಲಿ ಡ್ರಾಮಾ ಜೂನಿಯರ್ ಆದ ಮೇಲೆ ಸುದೀಪ್ ನಿರ್ಮಾಣದ `ವಾರಸ್ಧಾರ’ ಧಾರಾವಾಹಿಯ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದಳು. ನಂತರ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ `ಭೀಮಸೇನಾ ನಳಮಹರಾಜ’ ಚಿತ್ರದಲ್ಲಿ ಚಿತ್ರಾಲಿ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕೆಲ ಸಿನಿಮಾಗಳನ್ನು ಸಹ ಮಾಡಿದ್ದಾಳೆ.

Leave a Reply

Your email address will not be published. Required fields are marked *