Connect with us

Districts

ಕಡಲ ಮಕ್ಕಳಲ್ಲಿ ಭಯಬೇಡ, 7 ಮೀನುಗಾರರು ಜೀವಂತ ಬರುತ್ತಾರೆ: ಸಚಿವೆ ಜಯಮಾಲಾ

Published

on

ಉಡುಪಿ: ಇಲ್ಲಿನ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಡಿಸೆಂಬರ್ 15 ರಿಂದ ನಾಪತ್ತೆಯಾಗಿರುವ ಏಳು ಮೀನುಗಾರರು ವಾಪಾಸ್ ಬರುತ್ತಾರೆ ಎಂಬ ನಂಬಿಕೆ ಇದೆ. ಅವರನ್ನು ಅಪಹರಿಸಿ ಒತ್ತೆ ಇಟ್ಟಿರುವ ಬಗ್ಗೆಯೂ ನಮಗೆ ಗುಮಾನಿ ಇದೆ. ಸರಕಾರದ ಮಟ್ಟದಲ್ಲಿ ಎಲ್ಲಾ ಶೋಧಕಾರ್ಯ ಮಾಡಿದ್ದೇವೆ ಎಂದು ಉಡುಪಿ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೀನುಗಾರರು ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಎಂಬ ನಂಬಿಕೆಯಿದೆ. ಅಪಹರಿಸಿ ಒತ್ತೆ ಇಟ್ಟಿರುವ ಬಗ್ಗೆಯೂ ನಮಗೆ ಗುಮಾನಿ ಇದೆ. ಈ ಹಿಂದೆಯೂ ಒತ್ತೆ ಇಟ್ಟಿರುವ ಘಟನೆ ನಡೆದಿದೆ. ಕೇಂದ್ರ- ರಾಜ್ಯ ಸರ್ಕಾರ ಮೀನುಗಾರರ ಕುಟುಂಬದ ಜೊತೆಗಿದೆ. ನೌಕಾಸೇನೆ, ವಾಯುಸೇನೆ ಅಧಿಕಾರಿಗಳು, ಕೋಸ್ಟ್ ಗಾರ್ಡ್ ನಿರಂತರ ಹುಡುಕಾಟ ಮಾಡಿದ್ದಾರೆ. ಕೊಸ್ಟ್ ಗಾರ್ಡ್ ಇಲಾಖೆ ಕೂಡಾ ಕಾರ್ಯಾಚರಣೆ ಮಾಡುತ್ತಿದೆ ಎಂದು ಜಯಮಾಲಾ ಹೇಳಿದರು. ಇದನ್ನೂ ಓದಿ: ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ – ಭಾನುವಾರ ಬಂದರುಗಳು ಬಂದ್!

ಪ್ರತಿಭಟನೆ ಕೈಬಿಡಿ:
ಮೀನುಗಾರರು ನಾಳಿನ ಪ್ರತಿಭಟನೆ ಕೈಬಿಡಲಿ ಎಂದು ಮನವಿ ಮಾಡಿದ ಸಚಿವೆ, ಮೀನುಗಾರರ ನೋವು ನಮ್ಮ ನೋವೆಂದು ಭಾವಿಸಿದ್ದೇವೆ. ಗೃಹಸಚಿವರು ಉಡುಪಿಗೆ ಬಂದು ಸಭೆ ನಡೆಸುತ್ತಾರೆ. ಮೀನುಗಾರಿಕಾ ಸಚಿವರೂ ಉಡುಪಿಗೆ ಬರುತ್ತಾರೆ. ಭಯೋತ್ಪಾದಕ ಕೃತ್ಯ ಆಗಿದ್ದರೂ ಬಿಡಿಸಿಕೊಂಡು ತರುತ್ತೇವೆ. ಮೀನುಗಾರರು ಜೀವಂತ ಬಂದರೆ ಸಾಕು. ನಾನೂ ಕೂಡ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

ಡಿಸೆಂಬರ್13 ರಂದು ತೆರಳಿದ್ದ ಬೋಟ್ ಮಹಾರಾಷ್ಟ್ರ- ಗೋವಾ ಗಡಿಯಲ್ಲಿ ನಾಪತ್ತೆಯಾಗಿತ್ತು. ಬೋಟ್ ನಲ್ಲಿ ಉಡುಪಿಯ ಇಬ್ಬರು, ಉತ್ತರ ಕನ್ನಡದ ಐದು ಮೀನುಗಾರರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv